HEALTH TIPS

'ಹಣಕಾಸು ನಷ್ಟ ಹಾಗೂ ದಿವಾಳಿ ಸಂಹಿತೆ' ತಿದ್ದುಪಡಿ ಮಸೂದೆ ಅಂಗೀಕಾರ

          ನವದೆಹಲಿ: ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆಯೇ 'ಹಣಕಾಸು ನಷ್ಟ ಹಾಗೂ ದಿವಾಳಿ ಸಂಹಿತೆ' ತಿದ್ದುಪಡಿ ಮಸೂದೆಯನ್ನು ಮಂಗಳವಾರ ಅಂಗೀಕರಿಸಿದ ನಂತರ ರಾಜ್ಯಸಭೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.

          ಪೆಗಾಸಸ್‌ ಗೂಢಚರ್ಯೆ ತಂತ್ರಾಂಶದ ದುರ್ಬಳಕೆ, ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ಹಾಗೂ ಇತರ ವಿಷಯಗಳ ಕುರಿತು ಚರ್ಚೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದವು.

            ನಂತರ, ವಿರೋಧ ಪಕ್ಷಗಳು ಪ್ರತಿಭಟನೆಗೆ ಮುಂದಾದವು. ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಸೂದೆಯನ್ನು ಮಂಡಿಸಿದರು.  ಮಸೂದೆ ಮೇಲೆ ಕೆಲ ಹೊತ್ತಿನ ಚರ್ಚೆ ನಡೆಯಿತಲ್ಲದೇ, ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

            ವಿರೋಧ ಪಕ್ಷಗಳ ಸದಸ್ಯರು ಸಭಾಪತಿ ಪೀಠದ ಮುಂದೆ ಬಂದು ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಘೋಷಣೆಗಳನ್ನೂ ಕೂಗಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries