ತಿರುವನಂತಪುರಂ: ನೆಹರು ಯುವಕೇಂದ್ರ ರಾಜ್ಯ ಉಪನಿರ್ದೇಶಕ ಅಲಿ ಸಾಬ್ರಿನ್ ಅವರು ಮಲಬಾರ್ ದಂಗೆ ಮುನ್ನಡೆಸಿದ ಸ್ವಾತಂತ್ರ್ಯ ಹೋರಾಟಗಾರ ಎಂದು ವಾರಿಯಂಕುನ್ನತ್ ಕುಂಞÂ ಅಹಮ್ಮದ್ ಹಾಜಿ ಅವರನ್ನು ಶ್ಲಾಘಿಸಿರುವರು. ಜಿಲ್ಲೆಯ ಯುವ ಸ್ವಯಂಸೇವಕರ ವಾಟ್ಸಾಪ್ ಗ್ರೂಪ್‍ನಲ್ಲಿ ಸಂಬಂಧಿತ ವಿಡಿಯೋಗಳು ಮತ್ತು ಲಿಂಕ್‍ಗಳನ್ನು ಹರಡಲಾಗಿದೆ. ಸಾಬ್ರಿನ್ ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಟೀಕೆ ಮಾಡಿರುವರು.
ವಾರಿಯಂಕುನ್ನತ್ ಕುಣಞÂ ಅಹಮ್ಮದ್ ಹಾಜಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಮತ್ತು ಹುತಾತ್ಮರ ಪಟ್ಟಿಯಿಂದ ಹಾಜಿಯನ್ನು ತೆಗೆದುಹಾಕುವ ಕ್ರಮವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಅಲಿ ಸಾಬ್ರಿನ್ ಅವರು ವಾಟ್ಸಾಪ್ ಗ್ರೂಪ್‍ನಲ್ಲಿ ವಿಡಿಯೋ ಮತ್ತು ಲಿಂಕ್‍ಗಳನ್ನು ಹಂಚಿಕೊಂಡಿದ್ದರು. ವಾರಿಯಂ ಕುನ್ನತ್ ಕುನ್ಹಹಮ್ಮದ್ ಹಾಜಿಯನ್ನು ವೈಭವೀಕರಿಸುವ ಸಾಬ್ರಿನ್ ಅವರ ಕ್ರಮವನ್ನು ವಿರೋಧಿಸಿ ಯುವ ಕಾರ್ಯಕರ್ತರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆನ್ ಲೈನ್ ಮೂಲಕ ಸಾಬ್ರಿನ್ ಅವರಿಗೆ ಬೆದರಿಕೆ ಕೂಡಾ ಹಾಕಲಾಗಿದೆ ಎನ್ನಲಾಗಿದೆ.
ಸಾಬ್ರಿನ್ ಈ ಹಿಂದೆ ವಿವಾದದಲ್ಲಿ ಸಿಲುಕಿದ್ದರು. ಇತ್ತೀಚೆಗೆ ನೆಹರು ಯುವ ಕೇಂದ್ರದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕೌಶಲ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಮತಾಂತರಗೊಂಡವರು ಭಾಗವಹಿಸಿದ್ದು ಭಾರೀ ವಿವಾದ ಮತ್ತು ಟೀಕೆಗಳಿಗೆ ಕಾರಣವಾಗಿತ್ತು. ಕೇಂದ್ರ ಸರ್ಕಾರವು ಆಯೋಜಿಸಿದ್ದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಾಬ್ರಿನ್ ಅವರು ವಾರಿಯಂ ಕುನ್ನತ್ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದ್ದರು. ಆ ಬಳಿಕ ವಿವಾದಗಳು ಭುಗಿಲೆದ್ದಿದ್ದವು. ಪ್ರಕರಣದಲ್ಲಿ ಸಾಬ್ರಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು, ಎಬಿವಿಪಿ ಕೂಡ ತೀವ್ರ ಪ್ರತಿಭಟನೆಗೆ ಮುಂದಾಗಿದೆ.