ಕೋಝಿಕ್ಕೋಡ್: ರಾಜ್ಯದಲ್ಲಿ ಕೋವಿಡ್ ತೀವ್ರ ಗತಿಯಲ್ಲಿ ಹರಡುತ್ತಿದ್ದರೂ ಜವಾಬ್ದಾರಿಯನ್ನು ತೆಗೆದುಕೊಳ್ಳದ ಮುಖ್ಯಮಂತ್ರಿಯ ಕ್ರಮ ಅವಮಾನಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಟೀಕೆಮಾಡಿದ್ದಾರೆ. ಕೇರಳದಲ್ಲಿ ಜನರು ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಮಧ್ಯೆ ಮುಖ್ಯಮಂತ್ರಿಗಳು ಉಗ್ರರಿಗಾಗಿ ಸ್ತುತಿಗೀತೆಗಳನ್ನು ಹಾಡುತ್ತಿದ್ದಾರೆ. ಮುಖ್ಯಮಂತ್ರಿ ವಾರಿಯಂ ಕುನ್ನತ್ ನ್ನು ಹೊಗಳುವ ಮೂಲಕ ಮೂಲಭೂತವಾದಿಗಳನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸುರೇಂದ್ರನ್ ಹೇಳಿದರು.
ಕೊರೋನಾ ವಿಸ್ತರಣೆಯ ಟೀಕೆಗಳ ಬಳಿಕ ಸುದೀರ್ಘ ವಿರಾಮದ ತರುವಾಯ ಮಾಧ್ಯಮಗಳನ್ನು ಉದ್ದೇಶಿಸಿ ನಿನ್ನೆ ಮಾತನಾಡಿದ ಮುಖ್ಯಮಂತ್ರಿ ವಾರಿಯಂ ಕುನ್ನತ್ ನನ್ನು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಸುರೇಂದ್ರನ್ ಪ್ರತಿಕ್ರಿಯೆ ನೀಡಿದ್ದಾರೆ. ವಾರಿಯಂ ಕುನ್ನತ್ ಓರ್ವ ಸ್ವಾತಂತ್ರ್ಯ ಹೋರಾಟಗಾರ ಎಂದು ಪ್ರತಿಪಾದಿಸಿದ ಪಿಣರಾಯಿ ವಿಜಯನ್, ಮಲಬಾರ್ ನಲ್ಲಿ ನಡೆದದ್ದು ಸ್ವಾತಂತ್ರ್ಯ ಹೋರಾಟ ಮತ್ತು ಕೃಷಿ ಬಂಡಾಯ ಎಂದು ಹೇಳಿದರು. ಆರೋಗ್ಯ ಕ್ಷೇತ್ರದ ವೈಫಲ್ಯಕ್ಕೆ ಸ್ಪಂದಿಸದ ಮುಖ್ಯಮಂತ್ರಿ ವಾರಿಯಂ ಕುನ್ನತ್ ಅವರನ್ನು ಹೊಗಳುವ ಕ್ರಮದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಆರೋಗ್ಯ ವಲಯದ ವೈಫಲ್ಯಕ್ಕೆ ಪ್ರತಿಪಕ್ಷಗಳನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ದಿನಕ್ಕೆ 150-200 ಕೊರೋನಾ ಸಾವುಗಳಿಗೆ ಮತ್ತು ಕೋವಿಡ್ ಪ್ರತಿಶತಕ್ಕೆ ತಲಪಿರುವ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಬೇಕು ಎಂದು ಸುರೇಂದ್ರನ್ ಒತ್ತಾಯಿಸಿದರು.
ಮೊದಲ ಅಲೆಗಿಂತ ಹೆಚ್ಚು ರೋಗಿಗಳು ಕೇರಳದಲ್ಲಿ ಈಗಿದ್ದಾರೆ. ಕೊರೋನಾದ ಡೆಲ್ಟಾ ರೂಪಾಂತರದಿಂದಾಗಿ ವೈರಸ್ ಹರಡುವುದನ್ನು ಇತರ ರಾಜ್ಯಗಳು ಹೇಗೆ ನಿಯಂತ್ರಿಸಿದೆ ಎಂದು ಸುರೇಂದ್ರನ್ ಕೇಳಿದರು. ಪ್ರತಿಪಕ್ಷಗಳು ಟೀಕಿಸುವ ಟೀಕೆಗಳನ್ನು ಕೇರಳದ ವಿರುದ್ಧದ ಪಿತೂರಿಯ ಭಾಗವಾಗಿ ಬಿಂಬಿಸುವ ಮುಖ್ಯಮಂತ್ರಿಯ ತಂತ್ರ ಯಶಸ್ವಿಯಾಗುವುದಿಲ್ಲ. ವಿಫಲವಾದ ರಕ್ಷಣಾ ಕ್ರಮಗಳನ್ನು ಸಮರ್ಥಿಸುವ ಕ್ರಮ ಕೇರಳದ ಜನರಿಗೆ ಸವಾಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.