ತಿರುವನಂತಪುರ: ವೈದ್ಯರ ಮೇಲಿನ ಹಲ್ಲೆಗಳನ್ನು ಸಹಿಸಲಾಗದು ಮತ್ತು ಇದನ್ನು ಗಮನಿಸಿಯೂ ಸುಮ್ಮನಿರಲಾಗದು ಎಂದು ಐಎಂಎ ಹೇಳಿದೆ. ರಾಜ್ಯಾಧ್ಯಕ್ಷ ಡಾ. ಪಿ.ಟಿ. ಸಕರಿಯಾಸ್ ಮತ್ತು ರಾಜ್ಯ ಕಾರ್ಯದರ್ಶಿ ಡಾ. ಪ. ಗೋಪಿಕುಮಾರ್ ಅವರು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಹಿಳಾ ವೈದ್ಯರ ಮೇಲಿನ ದಾಳಿ, ಸರಣಿಯ ಇತ್ತೀಚಿನ ದಾಳಿಗಳು ಕಳವಳಕಾರಿ ಮತ್ತು ಸ್ತ್ರೀಯರ ಮೇಲಿನ ದೌರ್ಜನ್ಯವಾಗಿದೆ. ಕೇರಳದಲ್ಲಿ ನಡೆದ ಈ ಆಘಾತಕಾರಿ ಘಟನೆಯಲ್ಲಿ ಮಹಿಳಾ ವೈದ್ಯೆಯನ್ನು ಅಪಹರಿಸಿ ಆಕೆಯ ಬಟ್ಟೆ ಹರಿದು ಕ್ರೂರವಾಗಿ ಥಳಿಸಲಾಗಿದೆ. ಕೋವಿಡ್ ಚಿಕಿತ್ಸೆ ಸೇರಿದಂತೆ ತುರ್ತು ಕರ್ತವ್ಯಗಳಿಂದ ಮುಷ್ಕರದ ಹೆಸರಲ್ಲಿ ವೈದ್ಯರು ಎಳಸದಂತೆ ನೋಡಬೇಕಾದ ಜವಾಬ್ದಾರಿ ಸರ್ಕಾರದ್ದಾಗಿದೆ. ಆಸ್ಪತ್ರೆ ಸಂರಕ್ಷಣಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ಆಸ್ಪತ್ರೆಗಳನ್ನು ಸಂರಕ್ಷಿತ ಪ್ರದೇಶಗಳೆಂದು ಘೋಷಿಸುವುದು, ತುರ್ತು ಚಿಕಿತ್ಸಾ ವಿಭಾಗಗಳಲ್ಲಿ ಪೋಲೀಸ್ ನೆರವು ಹುದ್ದೆಗಳು ಮತ್ತು ಕ್ಯಾಮೆರಾಗಳನ್ನು ಅಳವಡಿಸುವುದು ಮತ್ತು ಆಸ್ಪತ್ರೆಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುವುದು ತಕ್ಷಣವೇ ಜಾರಿಗೊಳಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘವು ಹೇಳಿಕೆಯಲ್ಲಿ ತಿಳಿಸಿದೆ.
ಐಎಂಎ ಯು ಆಸ್ಪತ್ರೆ ದಾಳಿಗಳ ವಿರುದ್ಧ ಕೇಂದ್ರ ಶಾಸನವನ್ನು ತರಲು ಕೇಂದ್ರ ಸರ್ಕಾರಕ್ಕೆ ಕರೆ ನೀಡಿದೆ. ಸಾರ್ವಜನಿಕರ ವರ್ತನೆಯಿಂದ ನಾವು ಆಘಾತಕ್ಕೊಳಗಾಗಿದ್ದೇವೆ, ಇಂದು ಆರೋಗ್ಯ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಖಂಡಿಸಲು ಸಹ ಅಸಾಧ್ಯವಾಗಿದೆ. ವೈದ್ಯರ ಬಗೆಗೆ ಮಾನಸಿಕ ಬೆಂಬಲ ನೀಡಬೇಕಾದ ಪ್ರಜ್ಞಾವಂತ ಸಮಾಜ ಭಿನ್ನ ಹಾದಿ ಹಿಡಿದಿರುವುದು ತುಂಬಾ ದುರದೃಷ್ಟಕರ ಎಂದು ಐಎಂಎ ತಿಳಿಸಿದೆ.