ತಿರುವನಂತಪುರಂ: ಪೆÇ್ರಫೆಸರ್ ಓಂಚೇರಿ ಎನ್ ಎನ್ ಪಿಳ್ಳೈ ಅವರಿಗೆ 2020 ರ ಅತ್ಯುತ್ತಮ ಮಲಯಾಳಂ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ. ಓಂಚೇರಿಯವರ ‘ಆಕ್ಸಿಡೆಂಟ್’ ಸ್ಮರಣ ಸಂಚಿಕೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಓಂಚೇರಿ ಕೊಟ್ಟಾಯಂ ಜಿಲ್ಲೆಯ ವೈಕೊಮ್ ಮೂಲದವರು.
ಪ್ರಶಸ್ತಿಯು ರೂ 1 ಲಕ್ಷ ನಗದು, ಗೌರವ ಪ್ರಮಾಣ ಪತ್ರ ಮತ್ತು ಫಲಕವನ್ನು ಒಳಗೊಂಡಿದೆ. ಅವರು ಭಾರತೀಯ ಆಹಾರ ನಿಗಮದಲ್ಲಿ ಅಧಿಕಾರಿಯಾಗಿದ್ದರು.