ಬದಿಯಡ್ಕ: ಕಾಸರಗೋಡು ಕೃಷಿಕರ ಸಹಕಾರೀ ಮಾರಾಟ ಸಂಘ ನೀರ್ಚಾಲು ಇದರ ಆಶ್ರಯದಲ್ಲಿ ಸದಸ್ಯರ ಸಹಾಯ ನಿಧಿಯಿಂದ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಕೇರಳ ಸರ್ಕಾರ ಮಂಜೂರು ಮಾಡಿದ ಹಣವನ್ನು ಸಂಘದ ಸದಸ್ಯ ರಾಜ ಕೆ. ಶೆಟ್ಟಿ ಹಾಗೂ ಉಷಾ ಪಿ ಪಿ ಇವರಿಗೆ ಹಸ್ತಾಂತರಿಸಲಾಯಿತು.
ಸಂಘದ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಇವರ ನೇತೃತ್ವದಲ್ಲಿ ಕಾಸರಗೋಡು ಅಸಿಸ್ಟೆಂಟ್ ಜನರಲ್ ಪಿ ರವೀಂದ್ರ ಸಹಾಯ ಧನ ವಿತರಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಇಲಾಖಾಧಿಕಾರಿ ಮಣಿಕಂಠನ್, ಬಾಬುರಾಜ್, ಕಾರ್ಯದರ್ಶಿ ಅಪ್ಪಣ್ಣ ಬಿ.ಎಸ್ ಉಪಸ್ಥಿತರಿದ್ದರು.