ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಪೂರ್ಣರೂಪದಲ್ಲಿ ವಿತರಣೆ ನಡೆಸುವ ಉತ್ತಮ ತಳಿಯ ಮರವಾಗಿ ಬೆಳೆಯಬಲ್ಲ ಸಸಿಗಳ ಉತ್ಪಾದನೆ ಮತ್ತು ಸಾರ್ವಜನಿಕ ವಿತರಣೆ ಉದ್ದೇಶದಿಂದ ಸಮಾಜ ಅರಣ್ಯೀಕರಣ ವಿಭಾಗವು ಬೇಳದಲ್ಲಿ ನಿರ್ಮಿಸಿರುವ ಶಾಶ್ವತ ನರ್ಸರಿಯ ಉದ್ಘಾಟನೆ ಇಂದು(ಆ.27) ನಡೆಯಲಿದೆ.
ಅಂದು ನಡೆಯುವ ಸಮಾರಂಭದಲ್ಲಿ ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಉದ್ಘಾಟಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು.ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿರುವರು.
ವೈಜ್ಞಾನಿಕ ರೀತಿ ಸಸಿಗಳ ಉತ್ಪಾದನೆ ಮತ್ತು ವಿತರಣೆ, ಸಾರ್ವಜನಿಕರಲ್ಲಿ ಈ ಸಸಿಗಳ ಪೆÇೀಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶಗಳಿಂದ ಈ ನರ್ಸರಿ ಆರಂಭಿಸಲಾಗುತ್ತಿದೆ.