ಭಾರತೀಯ ವ್ಯೆದ್ಯಕೀಯ ಕ್ಷೇತ್ರದಲ್ಲಿ ಪಾರಂಪರಿಕ ಚಿಕಿತ್ಸಾ ವಿಧಾನ ಎಂದಿಗೂ ಕುತೂಹಲ,ರೋಚಕ ಮತ್ತು ಅಷ್ಟೇ ಮಹತ್ವಪೂರ್ಣವಾದುದು. ಗ್ರಾಮೀಣ ಪ್ರದೇಶಗಳ ಅಲ್ಲಲ್ಲಿ ವಿಶೇಷ ಪರಿಣಿತ, ಮ್ಯಾಜಿಕಲ್ ಸ್ಪರ್ಶದ ಅನೇಕಾನೇಕ ಸಾಧಕ ವ್ಯೆದ್ಯರುಗಳು ನಮ್ಮಲ್ಲಿದ್ದರು. ಅನೇಕ ಕಾರಣಗಳಿಂದ ಅಂತಹದೊಂದು ಪರಂಪರೆಗಳ ಕೊಂಡಿ ನಶಿಸುತ್ತಿರುವುದೂ ಹೌದು.
ಕಾಸರಗೋಡು ಜಿಲ್ಲೆಯ ಪೆರಡಾಲ ಗ್ರಾಮದ ಪಟ್ಟಾಜೆ ಹೇಳಿ ಕೇಳಿ ಹಲವು ಸಾಧಕರ ಹುಟ್ಟಿಗೆ ಕಾರಣವಾದ ಪುಟ್ಟ ಹಳ್ಳಿ. ಈ ಪ್ಯೆಕಿ ಪಟ್ಟಾಜೆ ವ್ಯೆದ್ಯರೆಂದರೆ ದಶಕಗಳಿಂದ ಹೆಸರೆತ್ತಿದ ಕುಟುಂಬ. ಪ್ರಸ್ತುತ ಇಲ್ಲಿಯ ಶ್ರೀರಾಮ ಭಟ್ ಹಲವು ರೋಗ ರುಜಿನಗಳಿಗೆ ರಾಮಬಾಣವಾಗಿ, ಪರಿಣಾಮಕಾರಿ ಪಾರಂಪರಿಕ ಚಿಕಿತ್ಸೆಯನ್ನು ಹಿರಿಯರಿಂದ ಬಳುವಳಿಯಾಗಿ ಪಡೆದು ಮುನ್ನಡೆಸುತ್ತಿದ್ದಾರೆ. ಸಮರಸ ಸುದ್ದಿ ಅವರ ಈ ಸೇವಾ ಕ್ಯೆಂಕರ್ಯದ ಸಾಧನೆಗಳನ್ನು ಸಂವಾದದ ಮೂಲಕ ಪರಿಚಯಿಸಲು ಯತ್ನಿಸಿದೆ. ವೀಕ್ಷಿಸಿ,ಪ್ರೋತ್ಸಾಹಿಸಿ...
ಸಮರಸ ಸಂವಾದ: ಔಷಧಿಯ ಜೊತೆಗೆ ನಂಬಿಕೆಯೂ ಬೇಕು ನೆಮ್ಮದಿಯ ಬದುಕಿಗೆ: ಅತಿಥಿ ಶ್ರೀರಾಮ ಭಟ್ ಪಟ್ಟಾಜೆ
0
ಆಗಸ್ಟ್ 27, 2021
Tags