ಕಾಸರಗೋಡು: ಕೆಎಸ್‍ಟಿಪಿ ರಸ್ತೆಯ ಕೋಟಿಕುಳಂನಿಂದ ಬೇಕಲ ವರೆಗೆ ಬೀದಿ ದೀಪಗಳನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಉದುಮ ಪಂಚಾಯಿತಿ ಸಮಿತಿ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
ಈ ಹಾದಿಯಲ್ಲಿ ಸ್ಥಾಪಿಸಲಾಗಿದ್ದ ಬೀದಿ ದೀಪ ಹಾಳಾಗಿ ಕೆಲವು ತಿಂಗಳು ಕಳೆದಿದ್ದು, ಇದನ್ನು ದುರಸ್ತಿಗೊಳಿಸಲು ಮುಂದಾಗದ ಅಧಿಕಾರಿಗಳ ಕ್ರಮ ಖಂಡನೀಯ. ಪಂಚಾಯಿತಿಯ ಕೋಟಿಕುಳಂ ವಾರ್ಡು ಸದಸ್ಯ ವಿನಯಕುಮಾರ್ ಧರಣಿ ಉದ್ಘಾಟಿಸಿದರು. ಬಿಜೆಪಿ ಪಂಚಾಇತಿ ಸಮಿತಿ ಅಧ್ಯಕ್ಷ ವಿನಾಯಕ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕೋಟಿಕುಳಂನಿಂದ ಬೇಕಲ ವರೆಗೆ ನಡೆದ ಪಂಜಿನ ಮೆರವಣಿಗೆಗೆ ಯುವಮೋರ್ಚಾ ಉದುಮ ಮಂಡಲ ಸಮಿತಿ ಸದಸ್ಯ ನಿತೇಶ್, ವಿನೋದ್ ಮುಂತಾದವರು ನೇತೃತ್ವ ನೀಡಿದರು. ಪಂಚಾಯಿತಿ ಸಮಿತಿ ಸದಸ್ಯ ಶಾಜಿ ಸ್ವಾಗತಿಸಿದರು. ಕೋಶಾಧಿಕಾರಿ ಸಿ. ಬಾಬು ವಂದಿಸಿದರು.