ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಕಲಾವಿದರ ಕೂಡುವಿಕೆಯಲ್ಲಿ ಧರ್ಮದೀಕ್ಷೆ ಆಖ್ಯಾಯಿಕೆಯ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ದೇವೀಪ್ರಸಾದ್ ಆಳ್ವ ತಲಪ್ಪಾಡಿ, ಪಲ್ಲವಿ ಜೆ.ಶೆಟ್ಟಿ, ಪ್ರಶಾಂತ್ ಶೆಟ್ಟಿ ವಗೆನಾಡು, ಲವಕುಮಾರ ಐಲ, ವಿಕ್ರಮ ಮಯ್ಯ ಪೈವಳಿಕೆ, ಅಶ್ವಥ್ ಮಂಜನಾಡಿ, ಮುಮ್ಮೇಳದಲ್ಲಿ ರಾಜೇಂದ್ರ ಕಲ್ಲೂರಾಯ ಎಡನೀರು, ವಾಸುದೇವ ರಂಗ ಭಟ್ ಮಧೂರು, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸದಾಶಿವ ಆಳ್ವ ತಲಪ್ಪಾಡಿ, ಶ್ರೀಕೃಷ್ಣ ದೇವಕಾನ, ಪ್ರಸಾದ ಸವಣೂರು ಸಹಕರಿಸಿದರು.