ಕಾಸರಗೋಡು: ಕೋವಿಡ್ 19 ಸೋಂಕು ಬಾಧೆಯ ಸ್ಥಿತಿಗತಿ ಅರಿತುಕೊಳ್ಳುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಗೆ ಸೋಮವಾರ ಆಗಮಿಸಿದ ಕೇಂದ್ರ ತಂಡ ಕಂಟೈನ್ಮೆಂಟ್ ಝೋನ್ ಗಳಿಗೆ ಬೇಟಿ ನೀಡಿದೆ. ಅಲ್ಲಿನ ಕೋವಿಡ್ ಬಾಧಿತರೊಂದಿಗೆ ನೇರ ಮಾತುಕತೆ ನಡೆಸಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಆರೋಗ್ಯ ಇಲಾಖೆ ಸಿಬ್ಬಂದಿ ಮೊದಲಾದವರು ಜತೆಗಿದ್ದರು. ಹೋಂ ಐಸೊಲೇಷನ್ ನಲ್ಲಿ ಪ್ರವೇಶಿಸಬೇಕಾದ ರೋಗಿಗಳನ್ನು ಸೂಕ್ಷ್ಮ ವಾಗಿ ಆಯ್ಕೆ ಮಾಡಬೇಕು ಎಂದು ತಂಡ ಆದೇಶಿಸಿದೆ. ಇಂಥವರ ಸಂಖ್ಯೆ ಕಡಿತಗೊಳ್ಳಬೇಕು. ಹೆಚ್ಚುವರಿ ಮಂದಿ ಮನೆಗಳಲ್ಲೇ ಉಳಿದರೆ ರೋಗ ಹೆಚ್ಚಳ ಅಧಿಕಗೊಳ್ಳುವ ಭೀತಿಯಿದೆ. ಹೋಂ ಐಸೋಲೇಷನ್ ನಲ್ಲಿರುವ ಹೈರಿಸ್ಕ್ ಕಾಂಟಾಕ್ಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬೇಕು. ಹೋಂ ಐಸೊಲೇಷನ್ ರೋಗಿಗಳು ಕಡ್ಡಾಯವಾಗಿ ರೂಂ ಕ್ವಾರೆಂಟೈನ್ ಪಾಲಿಸಬೇಕು ಎಂದು ತಂಡ ಆದೇಶಿಸಿದೆ.