ಪಟ್ನಾ: ರಕ್ಷಾಬಂಧನ ದಿನವಾದ ಇಂದು (ಆ.22) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವೃಕ್ಷಗಳಿಗೆ ರಾಖಿ ಕಟ್ಟಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.
2012ರಿಂದಲೂ ಬಿಹಾರದ ಎನ್‌ಡಿಎ ಸರ್ಕಾರ ರಕ್ಷಾಬಂಧನ ದಿನವನ್ನು 'ವೃಕ್ಷ ರಕ್ಷಾ ದಿನ' (ಮರ ಸಂರಕ್ಷಣಾ ದಿನ) ಎಂದು ಆಚರಿಸುತ್ತಿದೆ.
ಪಟ್ನಾದಲ್ಲಿ ನಿತೀಶ್ ಕುಮಾರ್ ವೃಕ್ಷಗಳಿಗೆ ರಾಖಿ ಕಟ್ಟುವ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದರು. ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರವನ್ನು ರಕ್ಷಣೆ ಮಾಡಬೇಕು ಎಂದು ಜನರಿಗೆ ಕರೆ ನೀಡಿದರು.
ರಾಜ್ಯದಲ್ಲಿ 'ಜಲ ಜೀವನ್ ಮಿಷನ್' ಯೋಜನೆ ಅಡಿಯಲ್ಲಿ ಸಸಿಗಳನ್ನು ನೆಡಲು ಸರ್ಕಾರ ಗಮನ ಹರಿಸಿದೆ. ಭವಿಷ್ಯದ ಪೀಳಿಗೆಗಾಗಿ ನಾವು ಸಸಿಗಳನ್ನು ನೆಟ್ಟು ಪರಿಸರವನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು.