ಕಾಸರಗೋಡು: ಕೋವಿಡ್ ಮಾನದಂಡ ಪಾಲಿಸುವುದರೊಂದಿಗೆ ಜಿಲ್ಲೆಯ ವಿವಿಧೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಬಹುತೇಕ ಕಡೆ ಸಾರ್ವಜನಿಕ ಆಚರಣೆಯನ್ನು ಕೈಬಿಡಲಾಗಿತ್ತು. ಮನೆಗಳಲ್ಲಿ ಕಂದಮ್ಮಗಳಿಗೆ ರಾಧೆ, ಕೃಷ್ಣ ವೇಷ ಹಾಕಿ ಸಂಭ್ರಮಿಸಲಾಯಿತು. ಕೃಷ್ಣ ದೇಗುಲಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಕೆಲವು ಕೇಂದ್ರಗಳಲ್ಲಿ ದೀರ್ಘ ಕಾಲದಿಂದ ನಡೆದುಬರುತ್ತಿದ್ದ ಮೆರವಣಿಗೆ, ಮೊಸರುಕುಡಿಕೆ, ಹಗ್ಗಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆಗಳನ್ನು ಕೈಬಿಡಲಾಗಿತ್ತು.
ಕಾಸರಗೋಡು ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜಯಂತಿ ಅಂಗವಾಗಿ ವಿಶೇಷ ಪೂಜೆ ನಡೆಯಿತು.