ಕಾಸರಗೋಡು: ಪೆರಿಯ ಕಲ್ಯೋಟ್ ಅವಳಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಬೈಕ್ ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿರುವುದನ್ನು ಖಂಡಿಸಿ ಯೂತ್ ಕಾಂಗ್ರೆಸ್ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಬೇಕಲ ಠಾಣೆಗೆ ಮುತ್ತಿಗೆ ನಡೆಯಿತು.
ಧರಣಿ ಉದ್ಘಾಟಿಸಿದ ಡಿಸಿಸಿ ಅಧ್ಯಕ್ಷ ಹಾಕಿಂ ಕುನ್ನಿಲ್ ಮಾತನಾಡಿ, ಅವಳಿ ಕೊಲೆಪ್ರಕರಣದಲ್ಲಿ ಬೈಕನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ ಕ್ರೈಂ ಬ್ರಾಂಚ್ ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿತ್ತು. ಬೈಕನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಬಿಐ ಸೂಚಿಸುತ್ತಿದ್ದಂತೆ ನಾಪತ್ತೆಯಾಗಿರುವುದರಲ್ಲಿ ನಿಗೂಢತೆ ಅಡಗಿದೆ. ಪ್ರಕರಣದ ತನಿಖೆ ಬುಡಮೇಲುಗೊಳಿಸುವ ತಂತ್ರ ಇದರಲ್ಲಿ ಅಕಡವಾಗಿರುವುದಾಗಿ ತಿಳಿಸಿದರು.
ಯೂತ್‍ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಪಿ ಪ್ರದೀಪ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವಿನೋದ್‍ಕುಮಾರ್, ಜಿಪಂ ಸದಸ್ಯ ಜೋಮೋನ್ ಜೋಸ್, ರಾಜೇಶ್ ತಂಬಾನ್, ಇಸ್ಮಯಿಲ್ ಚಿತ್ತಾರಿ, ಚಂದ್ರನ್ ನಾಲಾಂವಾದುಕಲ್, ಸುನಿಲ್ ಬಾರ, ರಾಹುಲ್ ರಾಮ್‍ನಗರ್, ಜೋಬಿನ್ ಬಾಬು, ನಿತಿನ್ ಮಾಙËಡ್ ಉಪಸ್ಥಿತರಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ಪೊಲೀಸ್‍ಠಾಣೆಯಿಂದ ಅನತಿದೂರದ ರಸ್ತೆಯಲ್ಲೇ ಬ್ಯಾರಿಕೇಡ್ ನಿರ್ಮಿಸಿ ತಡೆದಿದ್ದರೂ, ತಡೆ ಬೇಧಿಸಿ ಪ್ರತಿಭಟನಾಕಾರರು ಮುನ್ನುಗ್ಗಲೆತ್ನಿಸಿದರು.