ತಿರುವನಂತಪುರಂ: ಓಣಂ ಕಿಟ್ ಗಾಗಿ ರಾಜ್ಯ ಸರ್ಕಾರ ನಡೆಸಿದ ಏಲಕ್ಕಿ ಖರೀದಿಯಲ್ಲಿ 8 ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಶಾಸಕ ಪಿಟಿ ಥಾಮಸ್ ಆರೋಪಿಸಿರುವರು. ಸರ್ಕಾರವು ಏಲಕ್ಕಿಯನ್ನು ರೈತರಿಂದ ನೇರವಾಗಿ ಖರೀದಿಸದೆ ಮಧ್ಯವರ್ತಿಗಳ ಮೂಲಕ ಹೆಚ್ಚಿನ ಬೆಲೆಗೆ ಖರೀದಿಸಿತು. ಆದ್ದರಿಂದ ಇಲ್ಲಿ ನಡೆದಿರಬಹುದಾದ ಒಪ್ಪಂದದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸರ್ಕಾರವನ್ನು ಅವರು ಆಗ್ರಹಿಸಿದರು.
ಓಣಂ ಕಿಟ್‍ನಲ್ಲಿ ಏಲಕ್ಕಿಯನ್ನು ಸೇರಿಸುವುದರಿಂದ ಕೊರೋನಾ ಪರಿಸ್ಥಿತಿಯಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಏಲಕ್ಕಿ ರೈತರಿಗೆ ಸಹಾಯ ಮಾಡುತ್ತದೆ ಎಂದು ಸರ್ಕಾರ ಈ ಹಿಂದೆ ಹೇಳಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು, ಏಲಕ್ಕಿಯನ್ನು ಕಿಟ್‍ನಲ್ಲಿ ಸೇರಿಸಲು ನಿರ್ಧರಿಸಲಾಯಿತು. ಆದರೆ ಇದು ಮಾತ್ರ ಭಾರೀ ಭ್ರಷ್ಟಾಚಾರದ ವರದಿಗಳಿಗೆ ಕಾರಣವಾಗಿದೆ.
ಓಣಂ ಮೊದಲು ಕಿಟ್‍ಗಳನ್ನು ಜನರಿಗೆ ವಿತರಿಸಿಲ್ಲ ಎಂಬ ವ್ಯಾಪಕ ಟೀಕೆ ಇದೆ. 90.67 ಲಕ್ಷ ಕಾರ್ಡ್ ಹೊಂದಿರುವವರಲ್ಲಿ, ಕಿಟ್ ನ್ನು ನಿನ್ನೆಯವರೆಗೆ 60.60 ಲಕ್ಷ ಜನರಿಗೆ ವಿತರಿಸಲಾಗಿದೆ. ಸುಮಾರು 30 ಲಕ್ಷ ಜನರಿಗೆ ಉಚಿತ ಕಿಟ್ ಸಿಕ್ಕಿಲ್ಲ. ಪಡಿತರ ವ್ಯಾಪಾರಿಗಳು ಐಪೆÇೀಸ್ ಯಂತ್ರ ವ್ಯವಸ್ಥೆಯು ಕಿಟ್ ದಾಸ್ತಾನು ಇದೆ ಎಂದು ಹೇಳುತ್ತದೆ. ಆದರೆ ಪಡಿತರ ಅಂಗಡಿಗಳಿಗೆ ತಲುಪಿಲ್ಲ ಎಂದು ರೇಶನ್ ಅಂಗಡಿಯವರು ಹೇಳುತ್ತಾರೆ.