HEALTH TIPS

ಕಾಸರಗೋಡು ಜಿಲ್ಲೆಯ ಗಡಿ ವಲಯಗಳಲ್ಲಿ ಕಡಿಮೆಯಾಗುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ

          ಮಂಜೇಶ್ವರ: ರಾಜ್ಯದ ಗಡಿ ತಲಪ್ಪಾಡಿಯಲ್ಲಿ ಆರಂಭಿಸಲಾದ ಆರ್.ಟಿ.ಪಿ.ಸಿ.ಆರ್. ತಪಾಸಣೆಯಲ್ಲಿ ಪಾಸಿಟಿವಿಟಿ ರೇಟ್ ಶೇ 1ಕ್ಕಿಂತಲೂ ಕಡಿಮೆಯಾಗಿದೆ. ಇದಲ್ಲದೆ ಗಡಿ ಪಂಚಾಯತಿ ಗಳನ್ನು ಕೇಂದ್ರೀಕರಿಸಿ ನಡೆಸಲಾಗುವ ತಪಾಸಣೆಗಳಲ್ಲಿ ರೋಗ ಖಚಿತತೆಯ ಸಂಖ್ಯೆಯೂ ಕೆಳಮುಖವಾಗಿದೆ ಎಂದು ವರದಿಗಳು ತಿಳಿಸುತ್ತವೆ.

              ಕರ್ನಾಟಕಕ್ಕೆ ಪ್ರವೇಶಿಸುವ ವೇಳೆ ಆರ್.ಟಿ.ಪಿ.ಸಿ.ಆರ್. ತಪಾಸಣೆ ಫಲಿತಾಂಶ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿಯಲ್ಲಿ ಕೋವಿಡ್ ತಪಾಸಣೆ ಕೇಂದ್ರ ಆರಂಭಿಸಲಾಗಿದೆ. ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಸ್ಪೈಸ್ ಹೆಲ್ತ್ ಸಂಸ್ಥೆ ಆರ್.ಟಿ.ಪಿ.ಸಿ.ಆರ್. ತಪಾಸಣೆ ನಡೆಸುತ್ತಿದೆ. ತಲಪ್ಪಾಡಿಯ ವಿಶ್ವಾಸ್ ಸಭಾಂಗಣದಲ್ಲಿ ಗಂಟಲರಸ ತಪಾಸಣೆ ಕೇಂದ್ರ ಚಟುವಟಿಕೆ ನಡೆಸುತ್ತಿದ್ದು, ಪ್ರತಿದಿನ 350 ಮಂದಿಯ ತಪಾಸಣೆ ನಡೆದುಬರುತ್ತಿದೆ. ಆದರೆ ರೋಗ ಖಚಿತಗೊಂಡಿರುವುದು ಬೆರಳೆಣಿಕೆಯ ಮಂದಿಗೆ ಮಾತ್ರ. ಪ್ರತಿ ವಿಚಾರಕ್ಕೂ ಮಂಗಳೂರಿನ ಆಸ್ಪತ್ರೆಯನ್ನು ಆಶ್ರಯಿಸಬೇಕಾಗಿದ್ದ ಗಡಿಭಾಗದ ಜನಕ್ಕೆ ಗಡಿಯಲ್ಲಿ ತಪಾಸಣೆ ಕೇಂದ್ರ ಉಪಕಾರಪ್ರದವಾಗಿದೆ. 72 ತಾಸುಗಳ ಅವಧಿ ಹೊಂದಿರುವ ತಪಾಸಣೆ ಫಲಿತಾಂಶ ಮಾತ್ರ ಪರಿಶೀಲಿಸುವ ನಿಟ್ಟಿನಲ್ಲಿ ಇಲ್ಲಿ ನಡೆಸಲಾಗುವ ಉಚಿತ ಆರ್.ಟಿ.ಪಿ.ಸಿ.ಆರ್. ತಪಾಸಣೆ ಸಾಧಾರಣ ಪ್ರಜೆಗಳಿಗೆ ಸಾಂತ್ವನವಾಗಿದೆ. 

         ತಲಪ್ಪಾಡಿಯ ಕೇಂದ್ರದಲ್ಲಿ ತಪಾಸನೆಗಾಗಿ ಆಗಮಿಸುವ ಮಂದಿಯಲ್ಲಿ ಬಹುತೇಕರು ಗಡಿಭಾಗದ ನಿವಾಸಿಗಳೇ ಆಗಿದ್ದಾರೆ. ಇಲ್ಲಿನ ಕಳೆದ ಒಂದು ವಾರದ ಟೆಸ್ಟ್ ಪಾಸಿಟಿವಿಟಿ ರೇಟ್ ಶೇ 0.847 ಆಗಿದೆ. 2006 ಮಂದಿ ತಪಾಸಣೆಗೊಳಗಾದ ವೇಳೆ 17 ಮಂದಿಗೆ ಮಾತ್ರ ರೋಗ ಖಚಿತಗೊಂಡಿದೆ. ಆ.3ರಂದು ಆರಂಭಿಸಲಾದ ತಪಾಸಣೆಯಲ್ಲಿ 303 ಮಂದಿ ಭಾಗಿಯಾಗಿದ್ದು, ಇವರಲ್ಲಿ ಒಬ್ಬರಿಗೆ ಮಾತ್ರ ಪಾಸಿಟಿವ್ ಆಗಿತ್ತು. ಆ.4ರಂದು 352 ಮಂದಿ ತಪಾಸಣೆಗೊಳಗಾಗಿದ್ದು, 4 ಮಂದಿ, ಆ.5ರಂದು 323 ಮಂದಿಯಲ್ಲಿ 3 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆ.6 ರಂದು 275 ಮಂದಿ ತಪಾಸನೆಗೊಳಗಾಗಿದ್ದು, 2 ಮಂದಿಗೆ, 7ರಂದು 247 ಮಂದಿ ತಪಾಸಣೆಗೊಳಗಾಗಿದ್ದು, 2 ಮಂದಿಯಲ್ಲಿ ರೋಗ ಬಾಧೆ ಪತ್ತೆಯಾಗಿದೆ. ಆ.8ರಂದು 193 ಮಂದಿ ತಪಾಸಣೆಗೆ ಹಾಜರಾಗಿದ್ದು, ಇಬ್ಬರಿಗೆ, ಆ.9ರಂದು 313 ಮಂದಿ ಹಾಜರಾಗಿ ಮೂವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries