HEALTH TIPS

ಸತತ ಮೂರನೇ ದಿನ ಅತಿ ಹೆಚ್ಚು ಕೊರೊನಾ ಪ್ರಕರಣ; ಕೇರಳಕ್ಕೆ ಕೇಂದ್ರದಿಂದ ಪತ್ರ

                ತಿರುವನಂತಪುರಂ: ಕೇರಳದಲ್ಲಿ ಸತತ ಮೂರನೇ ದಿನ ಮೂವತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ದೇಶದ ಒಟ್ಟು ಪ್ರಕರಣಗಳ ಪೈಕಿ ಕೇರಳ ರಾಜ್ಯವೊಂದರಿಂದಲೇ ದಿನನಿತ್ಯ 65% ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಈ ಆತಂಕಕಾರಿ ಬೆಳವಣಿಗೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

          ರಾಜ್ಯದ ಪರಿಸ್ಥಿತಿ ಕುರಿತು ಅವರು ಕಳವಳ ವ್ಯಕ್ತಪಡಿಸಿದ್ದು, ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ತಿಳಿಸಿದ್ದಾರೆ.

            ಕೇರಳ ಮುಖ್ಯ ಕಾರ್ಯದರ್ಶಿ ವಿಪಿ ಜಾಯ್ ಅವರನ್ನುದ್ದೇಶಿಸಿ ಪತ್ರ ಬರೆದಿದ್ದು, ಆದ್ಯತೆಯಲ್ಲಿ ಕಂಟೈನ್ಮೆಂಟ್ ಮಟ್ಟದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. ಸೋಂಕಿನ ಹರಡುವಿಕೆ ಪರೀಕ್ಷಿಸಲು ಪರೀಕ್ಷಾ ಪ್ರಮಾಣವನ್ನು ಏರಿಸಲು ಸೂಚಿಸಲಾಗಿದೆ. ಎಲ್ಲಾ ಹದಿನಾಲ್ಕು ಜಿಲ್ಲೆಗಳು ಕಳೆದ ನಾಲ್ಕು ವಾರಗಳಲ್ಲಿ ಹೆಚ್ಚಿನ ಪಾಸಿಟಿವಿಟಿ ದರ ದಾಖಲಾಗಿದ್ದು, ದಿನನಿತ್ಯ ದೇಶದ ಕೊರೊನಾ ಪ್ರಕರಣಗಳ ಅರ್ಧದಷ್ಟು ಪಾಲು ಕೇರಳ ರಾಜ್ಯದಿಂದಲೇ ದಾಖಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

           ಸೋಂಕು ಹೆಚ್ಚಿರುವ ಕಡೆಗಳಲ್ಲಿ ಕೇಂದ್ರ ಸರ್ಕಾರದ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಹಾಗೂ ಸಂಪರ್ಕ ಪತ್ತೆ ಹಚ್ಚುವ ಕ್ರಮಗಳನ್ನು ಬಲಪಡಿಸಲು ಸಲಹೆ ನೀಡಿದೆ. ಎಲ್ಲಾ ಜಿಲ್ಲಾಡಳಿತಗಳಲ್ಲಿ ಹೋಂ ಕ್ವಾರಂಟೈನ್ ಅಂಗೀಕೃತ ನಿಯಮಗಳನ್ನು ಪಾಲಿಸಬೇಕು ಹಾಗೂ ಇಂಥ ಪ್ರಕರಣಗಳ ಮೇಲೆ ನಿರಂತರ ನಿಗಾ ಇಟ್ಟಿರಬೇಕು ಎಂದು ತಿಳಿಸಿದೆ. ಯಾವುದೇ ಸಮಯದಲ್ಲಿಯೂ ಕೊರೊನಾ ಸೂಕ್ತ ನಡವಳಿಕೆಯೊಂದಿಗೆ ರಾಜಿ ಮಾಡಿಕೊಳ್ಳಬಾರದು. ಹೆಚ್ಚು ಜನರು ಒಂದೆಡೆ ಸೇರುವುದನ್ನು ಸಂಪೂರ್ಣ ತಪ್ಪಿಸಬೇಕು ಎಂದು ಹೇಳಲಾಗಿದೆ.

          ಹೆಚ್ಚಿನ ಸೋಂಕು ಪ್ರಸರಣದ ಪ್ರದೇಶಗಳಲ್ಲಿ ಸೋಂಕಿನ ಮಾದರಿಯ ಜೆನೋಮಿಕ್ ಪರೀಕ್ಷೆಗೆ ಒತ್ತು ನೀಡಬೇಕು ಹಾಗೂ ಲಸಿಕೆ ಪಡೆದ ಮೇಲೂ ಸೋಂಕು ತಗುಲಿದ್ದು ಕಂಡುಬಂದರೆ ಆ ಮಾದರಿಯನ್ನು ಜೆನೋಮಿಕ್ ಪರೀಕ್ಷೆಗೆ ಕಳುಹಿಸಿಕೊಡಬೇಕು ಎಂದು ತಿಳಿಸಿದೆ.

              ಪ್ರತಿ ಜಿಲ್ಲೆಯಲ್ಲಿಯೂ ಪರಿಸ್ಥಿತಿಗೆ ತಕ್ಕಂತೆ ಲಸಿಕೆ ವಿತರಣೆ ನಡೆಯಬೇಕು. 'ಟೆಸ್ಟ್ರ್‌, ಟ್ರ್ಯಾಕ್, ಟ್ರೀಟ್, ವ್ಯಾಕ್ಸಿನೇಟ್ ಹಾಗೂ ಕೊರೊನಾ ನಿಯಮಗಳಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ರಾಜ್ಯದಲ್ಲಿ ಸೋಂಕು ಇನ್ನಷ್ಟು ವೇಗದಲ್ಲಿ ಹರಡುತ್ತದೆ ಎಂದು ಎಚ್ಚರಿಕೆ ರವಾನಿಸಲಾಗಿದೆ.

         ಕೇರಳದಲ್ಲಿ ಸತತ ಮೂರನೇ ದಿನವಾದ ಶುಕ್ರವಾರವೂ ಮೂವತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಪ್ರಕರಣಗಳಲ್ಲಿ ಈ ರಾಜ್ಯವೊಂದರಲ್ಲೇ 65% ಪ್ರಕರಣಗಳು ವರದಿಯಾಗಿವೆ. ಶುಕ್ರವಾರ 32,801 ಪ್ರಕರಣಗಳು ದಾಖಲಾಗಿವೆ. 17,703 ಮಾದರಿಗಳನ್ನು ಪರೀಕ್ಷಿಸಲಾಗಿದೆ. 179 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಇದುವರೆಗೂ ಸಾವನ್ನಪ್ಪಿದ್ದವರ ಸಂಖ್ಯೆ 20313 ಆಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, 195254 ಆಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

                                 ಮನೆಯೊಳಗೇ ಸೋಂಕು ಹರಡುವಿಕೆ ಹೆಚ್ಚು:

        ಕೇರಳದಲ್ಲಿ ಕೊರೊನಾ ಏರಿಕೆ ಕುರಿತು ಮಾಹಿತಿ ನೀಡಿರುವ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, 'ರಾಜ್ಯದಲ್ಲಿ ಮನೆಯೊಳಗೇ ಕೊರೊನಾ ಸೋಂಕಿನ ಹರಡುವಿಕೆ ಹೆಚ್ಚಾಗುತ್ತಿದೆ' ಎಂದಿದ್ದಾರೆ. ಸದ್ಯಕ್ಕೆ ರಾಜ್ಯದ ಕೊರೊನಾ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ, ಕೊರೊನಾ ಸೋಂಕಿನ ಹರಡುವಿಕೆ ಮನೆಯೊಳಗೇ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಇಂಥ ಪ್ರಕರಣಗಳು ರಾಜ್ಯದಲ್ಲಿ ಅಧಿಕವಿದೆ ಎಂದಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ಈ ಸಂಬಂಧ ಅಧ್ಯಯನ ನಡೆಸಿದ್ದು, ಈ ಮಾಹಿತಿ ಪ್ರಕಾರ 35% ಕೊರೊನಾ ಪ್ರಕರಣಗಳು ಮನೆಯ ಪರಿಧಿಯೊಳಗೇ ಹರಡಿದ್ದಾಗಿದೆ.

             'ಮನೆಯಲ್ಲಿನ ಒಬ್ಬ ಸದಸ್ಯರಿಗೆ ಸೋಂಕು ತಗುಲಿದರೆ, ಅದು ಮನೆಯಲ್ಲಿರುವ ಇತರೆ ಎಲ್ಲಾ ಸದಸ್ಯರಿಗೂ ಹರಡುತ್ತದೆ. ಜನರು ಹೋಂ ಕ್ವಾರಂಟೈನ್ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದು ಇದಕ್ಕೆ ಕಾರಣವಾಗಿದೆ. ಮನೆಯೊಳಗೆ ಎಲ್ಲಾ ಸೌಲಭ್ಯವಿದ್ದವರು ಮಾತ್ರ ಮನೆಯಲ್ಲಿ ಚಿಕಿತ್ಸೆ ಪಡೆದುಕೊಂಡರೆ ಸೂಕ್ತ. ಇಲ್ಲವೆಂದರೆ ಕೋವಿಡ್ ಕಾಳಜಿ ಕೇಂದ್ರಗಳಿಗೆ ದಾಖಲಾಗಿ' ಎಂದು ವೀಣಾ ಜಾರ್ಜ್ ಮನವಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries