HEALTH TIPS

ಕೇರಳದಲ್ಲಿ ಧಾರ್ಮಿಕ ಒಟ್ಟುಸೇರುವಿಕೆಯೇ ಸೋಂಕಿನ ಹರಡುವಿಕೆ ಹೆಚ್ಚಳಗೊಳ್ಳಲು ಕಾರಣವಾಯಿತು: ಅನುರಾಗ್ ಅಗರ್ವಾಲ್

                          

              ನವದೆಹಲಿ: ಕೇರಳದಲ್ಲಿ ಧಾರ್ಮಿಕ ಸಮಾರಂಭಗಳಿಗೆ ಜನಸಂದಣಿಯನ್ನು ಅನುಮತಿಸುವುದು ಸೂಕ್ತವಲ್ಲ ಎಂದು ಕೊರೋನಾ-ಜೆನೆಟಿಕ್ ಮಾನಿಟರಿಂಗ್ ಏಜೆನ್ಸಿಯ ನಿರ್ದೇಶಕ ಅನುರಾಗ್ ಅಗರ್ವಾಲ್ ಹೇಳಿದ್ದಾರೆ.

               ಭಕ್ತರು ರಾಜ್ಯದ ಪೂಜಾ ಸ್ಥಳಗಳಲ್ಲಿ ವಿಶೇಷ ಸಮಾರಂಭಗಳಿಗೆ ಸೇರುವುದನ್ನು ತಪ್ಪಿಸಬಹುದಿತ್ತು. ಇದು 10 ಶೇಕಡಾಕ್ಕಿಂತ ಹೆಚ್ಚಿನ ಟಿಪಿಆರ್ ಹೆಚ್ಚಳಕ್ಕೆ ಕಾರಣವಾಯಿತು. ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ಅನುರಾಗ್ ಅಗರ್ವಾಲ್ ಈ ಬಗ್ಗೆ ಹೇಳಿದರು, ಜನಸಂದಣಿಯು ರೋಗಿಗಳ ಸಂಖ್ಯೆಯನ್ನು ದಿನಕ್ಕೆ 13,000 ದಿಂದ 20,000 ಕ್ಕೆ ಹೆಚ್ಚಿಸಿದೆ. ಭಾರತದ ಸಾರ್ಸ್-ಕೋವಿಡ್ 2 ಜೀನೋಮಿಕ್ಸ್ ಒಕ್ಕೂಟದ ನಿರ್ದೇಶಕರಲ್ಲಿ ಅಗರ್ವಾಲ್ ಕೂಡಾ ಒಬ್ಬರು.

                 ರಾಜ್ಯ ಸರ್ಕಾರವು ಕೇರಳದಲ್ಲಿ ಕೇವಲ ಪೂಜಾ ಸ್ಥಳಗಳಿಗೆ ಐವರಿಗೆ ಮಾತ್ರ ಪ್ರವೇಶವನ್ನು ಅನುಮತಿಸುವ ಆದೇಶವನ್ನು ಹಿಂಪಡೆದಿತ್ತು. ಮುಸ್ಲಿಂ ಸಂಘಟನೆಗಳು ತೀವ್ರ ಒತ್ತಡ ಹೇರಿದ ತರುವಾಯ  ಪಿಣರಾಯಿ ಸರ್ಕಾರ ಆದೇಶವನ್ನು ಹಿಂತೆಗೆದುಕೊಂಡಿತು. ಭಕ್ತರ ಅಗತ್ಯಗಳನ್ನು ಪರಿಗಣಿಸಬೇಕೆಂಬ ವಾದದೊಂದಿಗೆ ಸಿಪಿಎಂ ರಾಜ್ಯ ಕಾರ್ಯಾಲಯವು ಒತ್ತಡ ಹೇರಿತ್ತು. 

                ಅನುರಾಗ್ ಅಗರ್‍ವಾಲ್ ಅವರು ಸೆಪ್ಟೆಂಬರ್-ಅಕ್ಟೋಬರ್‍ನಲ್ಲಿ ಭಾರತದಲ್ಲಿ ಮೂರನೇ ತರಂಗ ಕೊರೊನಾದ ನಿರೀಕ್ಷೆಯಿದೆ ಎಂದಿರುವರು. ಆದರೆ ಎರಡನೇ ತರಂಗ ಇನ್ನೂ ಮುಗಿದಿಲ್ಲ. ಅನೇಕ ರಾಜ್ಯಗಳಲ್ಲಿ ವಿವಿಧ ಸಮಯಗಳಲ್ಲಿ ಎರಡನೇ ಬಾರಿಗೆ ಬಂದಿರುವುದೇ ಇದಕ್ಕೆ ಕಾರಣ. ಭವಿಷ್ಯದಲ್ಲಿ ವೈರಸ್ ಹರಡುವುದನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಲಸಿಕೆಯನ್ನು ಚುರುಕುಗೊಳಿಸುವುದು ಎಂದು ಅನುರಾಗ್ ಅಗರ್ವಾಲ್ ಸಲಹೆ ನೀಡಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries