ತಿರುವನಂತಪುರ: ರಾಜ್ಯದಲ್ಲಿ ಜಾರಿಯಲ್ಲಿರುವ ಪ್ರವಾಹ ಸೆಸ್ ನ್ನು ಹಿಂಪಡೆಯಲಾಗಿದೆ. ಸಾರ್ವಜನಿಕರು ಮತ್ತು ವ್ಯಾಪಾರಿಗಳಿಂದ ಸಂಗ್ರಹಿಸುತ್ತಿದ್ದ ಪ್ರವಾಹ ನೆರವಿನ ಹೆಚ್ಚುವರಿ ಸೆಸ್ ಮೊತ್ತವನ್ನು ಹಿಂಪಡೆಯಲಾಗಿದೆ. ಕೇಂದ್ರ ಮತ್ತು ಇತರ ವಿದೇಶಿ ರಾಷ್ಟ್ರಗಳಿಂದ ಧಾರಾಳ ನೆರವು ಪಡೆದರೂ, ಪ್ರವಾಹ ಸೆಸ್ ಸಂಗ್ರಹವು ಕಳೆದ ಎರಡು ವರ್ಷಗಳಿಂದ ಮುಂದುವರಿದಿತ್ತು.
ಇದು ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡುತ್ತದೆ. ಈ ನಿರ್ಧಾರವು ವಿಮಾ ವಲಯಕ್ಕೆ ಪರಿಹಾರವನ್ನು ತರಲಿದೆ.ವಿಮಾ ವಲಯ ಪ್ರವಾಹ ಸೆಸ್‍ಗೆ ಒಳಪಟ್ಟಿತ್ತು. ಆಟೋಮೊಬೈಲ್ ವಲಯದಲ್ಲಿ ಕಾರು ವಿಮೆ 4,000 ರೂ.ಗಳವರೆಗೆ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ವಾಹನ ತೆರಿಗೆಯಲ್ಲಿ ಸೆಸ್ ವಿನಾಯಿತಿ ಕೂಡ ಪರಿಣಾಮ ಬೀರಲಿದೆ. ವಾಹನಗಳ ಬೆಲೆಯೂ ಕಡಿಮೆಯಾಗಲಿದೆ.
ಗೃಹೋಪಯೋಗಿ ಉಪಕರಣಗಳ ಮೇಲೆ ಒಂದು ಶೇಕಡಾ ಸೆಸ್ ವಿಧಿಸಲಾಗುತ್ತಿತ್ತು. 200 ರಿಂದ ಆರಂಭವಾಗುವ ಎಲ್ಲಾ ಉತ್ಪನ್ನಗಳ ಮೇಲೆ ರಿಯಾಯಿತಿಗಳು ಪ್ರತಿಫಲಿಸುತ್ತದೆ. ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಮೊಬೈಲ್ ಪೋನ್‍ಗಳು ಅಗ್ಗವಾಗಲಿದೆ. ಅಟೋಮೊಬೈಲ್ ವಲಯದಲ್ಲಿ, ಟಯರ್‍ಗಳು ಮತ್ತು ಬ್ಯಾಟರಿಗಳು ಸೇರಿದಂತೆ ಕಾಲಕಾಲಕ್ಕೆ ಬದಲಿಸಬೇಕಾದ ವಸ್ತುಗಳ ಬೆಲೆಗಳು ಇಳಿಯುತ್ತವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.