ಕಾಸರಗೋಡು: ಜಗದೋದ್ಧಾರಕ ಶ್ರೀ ಕೃಷ್ಣನ ಸಂದೇಶ ಸಾರ್ವಕಾಲಿಕವಾದುದು. ವಿಶ್ವದೆಲ್ಲೆಡೆ ಶ್ರೀಕೃಷ್ಣನನ್ನು ಆರಾಧಿಸಲಾಗುತ್ತಿದೆ. ಕೃಷ್ಣನ ಪ್ರತಿಯೊಂದು ಬಾಲ ಲೀಲೆಗಳು, ಪವಾಡಗಳು ಎಲ್ಲವೂ ಅವಿಸ್ಮರಣೀಯವಾದುದು. ಕೃಷ್ಣ ನೀಡಿರುವ ಪ್ರತಿಯೊಂದು ಸಂದೇಶ ಮನೆ ಮನೆಯಲ್ಲೂ ಪಾಲಿಸುವಂತಾಗಬೇಕು. ಈ ಮೂಲಕ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಬಹುದೆಂದು ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅವರು ಹೇಳಿದರು.
ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಿದ 19 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಹಾಗು 10 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಬ್ರಹ್ಮಶ್ರೀ ಚಕ್ರಪಾಣಿ ದೇವ ಪುಣಿಚಿತ್ತಾಯ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನವಿತ್ತರು.
ಕೋಟೆಕಣಿ ಆಟ್ರ್ಸ್ ಆ್ಯಂಡ್ ಸ್ಪೋಟ್ರ್ಸ್ ಕ್ಲಬ್ ಕಾರ್ಯದರ್ಶಿ ಹರೀಶ್ ಕುಮಾರ್ ಕೆ.ಎಂ. ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಆನ್‍ಲೈನ್ ಮೂಲಕ ಕಂದ ಕೃಷ್ಣ, ಮುದ್ದು ಕೃಷ್ಣ, ಶ್ರೀಕೃಷ್ಣ, ಯಶೋದ ಕೃಷ್ಣ ವೇಷ ಸ್ಪ`ರ್Éಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕೊರೊನಾ ನಿಬಂಧನೆಗಳಂತೆ ನಡೆಸಲಾಯಿತು.
ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾವ್ಯ ಕುಶಲ ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಅಶೋಕನಗರ ಮತ್ತು ಜಯಾನಂದ ಕುಮಾರ್ ಹೊಸದುರ್ಗ ಶ್ರೀ ಕೃಷ್ಣನ ಭಕ್ತಿಗೀತೆಗಳನ್ನು ಹಾಡಿದರು. ದಿವಾಕರ ಅಶೋಕನಗರ ವಂದಿಸಿದರು.