HEALTH TIPS

ರಿಲಯನ್ಸ್ ತೆಕ್ಕೆಗೆ ಬಿದ್ದ ಬಿಪಿಎಲ್, ಕೆಲ್ವಿನೇಟರ್ ಬ್ರ್ಯಾಂಡ್

                  ಬೆಂಗಳೂರು : ಬಿಪಿಎಲ್‌ನ ಹೊಸ ಧ್ಯೇಯ "ಖುಷಿಯ ಸಣ್ಣ ಸಂಗತಿಗಳು" ಎಂಬುದು ಮಹತ್ವದ ವ್ಯತ್ಯಾಸ ಉಂಟುಮಾಡುವ ಸಣ್ಣ ಸಂಗತಿಗಳ ಕುರಿತ ವಿಶಿಷ್ಟ ಗ್ರಾಹಕರ ಒಳನೋಟದಿಂದ ಸ್ಫೂರ್ತಿ ಪಡೆದಿದೆ. ನವೀನ ಗ್ರಾಹಕ ಎಲೆಕ್ಟ್ರಾನಿಕ್ಸ್‌ನ ಇತ್ತೀಚಿನ ಕೊಡುಗೆಗಳನ್ನು ಇದು ಪ್ರತಿಫಲಿಸುತ್ತದೆ.


              ಆಳವಾದ ಮಾರ್ಕೆಟ್ ಸಂಶೋಧನೆ ಮತ್ತು ಗ್ರಾಹಕ ವರ್ತನೆ ಅಧ್ಯಯನದ ಬೆಂಬಲವನ್ನು ಹೊಂದಿರುವ ಈ ಶ್ರೇಣಿಯು ವಿನ್ಯಾಸ ಮತ್ತು ಕಾರ್ಯಕ್ಷಮತೆಯಲ್ಲಿನ ಸಣ್ಣ ಸಣ್ಣ ಸಂಗತಿಗಳ ಮೇಲೂ ಗಮನ ಹರಿಸಿದೆ. ಕಂಪನಿ ನಂಬುವ ಹಾಗೆ ಇಂತಹ ವಿವರಗಳು ಮೇಲ್ನೋಟಕ್ಕೆ ಗಮನಕ್ಕೆ ಬರುವುದಿಲ್ಲ. ಆದರೆ, ಗ್ರಾಹಕರ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ಮಾಡುತ್ತದೆ.

            ಇತ್ತೀಚೆಗೆ ಜನರು ಹೆಚ್ಚು ಸಮಯವನ್ನು ಮನೆಯೊಳಗೇ ಕಳೆಯುತ್ತಿದ್ದಾರೆ. ಇಡೀ ದಿನ ಕೂಲಿಂಗ್‌ ಒದಗಿಸುವುದಕ್ಕೆ ಗ್ರಾಹಕರು ಇನ್ನು ಶಕ್ತಿಯು ಫೈಟೆಕ್‌ ಫಿಲ್ಟ್ರೇಶನ್‌ ಹೊಂದಿರುವ ಬಿಪಿಎಲ್ ಎಸಿಗಳ ವಿಶಾಲ ಶ್ರೇಣಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರ ಜೊತೆಗೆ, ಗ್ರಾಹಕರು ಆಹ್ಲಾದಕರ ಗಾಳಿಯನ್ನು ಬಯಸಿದರೆ ಆಂಟಿ ಬ್ಯಾಕ್ಟೇರಿಯ ಮತ್ತು ಆಂಟಿ ಡಸ್ಟ್ ಡೆಕೊರೇಟಿವ್ ಫ್ಯಾನ್‌ಗಳೂ ಇವೆ.

ಆಹಾರವನ್ನು ಇಷ್ಟಪಟ್ಟವರಿಗೆ, ನ್ಯಾಚುರಾ ಫ್ರೆಶ್ ಟೆಕ್ನಾಲಜಿ ಹೊಂದಿರುವ ಬಿಪಿಎಲ್ ರೆಫ್ರಿಜರೇಟರ್‌ಗಳು ಅತ್ಯುತ್ತಮವಾಗಿವೆ. ಇದರ ಒಳಗೆ ಸಂಗ್ರಹಿಸಲಾಗುವ ಆಹಾರವು ತಾಜಾ ಆಗಿರುತ್ತದೆ ಮತ್ತು ತಾಜಾ ಸುಗಂಧವನ್ನೂ ಸೂಸುತ್ತದೆ. ಇನ್ನು ದುರ್ಗಂಧ ಬರುವುದಿಲ್ಲ!


                            30% ಕಡಿಮೆ ನೀರು ಬಳಸುವ ವಾಶಿಂಗ್ ಮಶಿನ್‌

             ವಿವಿಧ ಪ್ಲಾಟ್‌ಫಾರಂಗಳಲ್ಲಿ ವಿವಿಧ ರೀತಿಯ ಕಂಟೆಂಟ್ ಲಭ್ಯವಿರುವುದರಿಂದ, ಹೊಂದಿಕೊಳ್ಳುವ ಮತ್ತು ಸ್ಮಾರ್ಟ್‌ ಆಗಿರುವ ಟಿವಿಗಳಿಗೆ ಗ್ರಾಹಕರು ಬೇಡಿಕೆ ಇಡುತ್ತಿದ್ದಾರೆ. ಬಿಪಿಎಲ್‌ನ ಹೊಸ 4ಕೆ ಆಂಡ್ರಾಯ್ಡ್‌ ಸ್ಮಾರ್ಟ್‌ ಟಿವಿಗಳ ಹೊಸ ಶ್ರೇಣಿಯು ಅತ್ಯಾಧುನಿಕ ಡಿಸ್‌ಪ್ಲೇ ಹೊಂದಿದೆ ಮತ್ತು ಕ್ರಿಸ್ಟಲ್ ಕ್ಲಿಯರ್ ಮತ್ತು ಬೆಜೆಲ್‌ ಇಲ್ಲದ ವೀಕ್ಷಣೆ ಅನುಭವವನ್ನು ಒದಗಿಸುತ್ತದೆ. ನೀರು ಉಳಿತಾಯಕ್ಕೆ ಸಹಾಯ ಮಾಡುವುದಕ್ಕಾಗಿ, ತೊಳೆಯುವ ಗುಣಮಟ್ಟದ ಮೇಲೆ ಯಾವುದೇ ರಾಜಿ ಇಲ್ಲದೇ 30% ಕಡಿಮೆ ನೀರು ಬಳಸುವ ವಾಶಿಂಗ್ ಮಶಿನ್‌ಗಳ ಶ್ರೇಣಿಯನ್ನು ಬಿಪಿಎಲ್ ಹೊಂದಿದೆ.

                         ಪವರ್ ಅಪ್ ಇನ್ವರ್ಟರ್ ಲೈಟ್‌

           ಮಾನವರ ಅಸ್ತಿತ್ವವನ್ನು ಆಧರಿಸಿ ಸ್ವಯಂಚಾಲಿತವಾಗಿ ಆನ್‌/ಆಫ್‌ ಮಾಡಲು ಮ್ಯಾಜಿಕ್ ಸೆನ್ಸರ್‌ ಲೈಟ್‌ಗಳ ಶ್ರೇಣಿಯು ಲಭ್ಯವಿದ್ದು, ಇಂಧನದ ಬಗ್ಗೆ ಕಾಳಜಿ ಹೊಂದಿರುವ ಗ್ರಾಹಕರಿಗೆ ಇದು ಸೂಕ್ತವಾಗಿದೆ. ವಿದ್ಯುತ್ ಉಳಿತಾಯ ಹಿಂದೆಂದೂ ಇಷ್ಟು ಸುಲಭವಾಗಿರಲಿಲ್ಲ! ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಬಹುದಾದ ಸ್ಮಾರ್ಟ್‌ ಲೈಟ್‌ಗಳೂ ಲಭ್ಯವಿವೆ. ವಿದ್ಯುತ್ ಖೋತಾ ಆದಲ್ಲಿ, ನಿಮ್ಮ ರಕ್ಷಣೆಗೆ ಪವರ್ ಅಪ್ ಇನ್ವರ್ಟರ್ ಲೈಟ್‌ಗಳು ಲಭ್ಯವಿರುತ್ತವೆ.

               ಆಡಿಯೋ ಪ್ರಿಯರಿಗೆ ಹೆಚ್ಚುವರಿ ಗಂಟೆಗಳ ಪ್ಲೇ ಮಾಡುವ ಸಾಮರ್ಥ್ಯ ಇರುವ ಆಡಿಯೋ ಸಾಧನಗಳನ್ನು ಬಿಪಿಎಲ್ ಹೊಂದಿದೆ. ಇದರ ಹೊರತಾಗಿ, ಸಣ್ಣ ಅಡುಗೆ ಮತ್ತು ಮನೆ ಬಳಕೆ ಸಾಮಗ್ರಿಗಳು ಮತ್ತು ವೈಯಕ್ತಿಕ ಆರೈಕೆಯ ಎಲೆಕ್ಟ್ರಾನಿಕ್ಸ್‌ ಸಲಕರಣೆಗಳೂ ಇವೆ.

                             ವಿಶೇಷ ಹಣಕಾಸು ಕೊಡುಗೆಗಳು ಲಭ್ಯ

         ಸಾಮಾಜಿಕ ಮಾಧ್ಯಮ, ಟಿವಿ ಮತ್ತು ಮುದ್ರಣ ಮಾಧ್ಯಮದಲ್ಲಿ ಕ್ಯಾಂಪೇನ್ ಅನ್ನು ಆಯೋಜಿಸಿ, ಈ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸಲಾಗುತ್ತದೆ.

           ಬಿಪಿಎಲ್ ಉತ್ಪನ್ನಗಳು ಸ್ಥಳೀಯ ಎಲೆಕ್ಟ್ರಾನಿಕ್ ಸ್ಟೋರ್‌ಗಳು, ದೊಡ್ಡ ಪ್ರಮಾಣದ ಸ್ಟೋರ್‌ಗಳು ಮತ್ತು ಆಧುನಿಕ ರಿಟೇಲ್ ಔಟ್‌ಲೆಟ್‌ಗಳ ಮೂಲಕ ದೇಶಾದ್ಯಂತ ಲಭ್ಯವಿದೆ. ಸಮೀಪದ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಅಥವಾ ಪ್ರಮುಖ ರಿಟೇಲರ್‌ಗಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ಗ್ರಾಹಕರು ತಮ್ಮ ಇಷ್ಟದ ಉತ್ಪನ್ನಗಳನ್ನು ಖರೀದಿ ಮಾಡಬಹುದು. ಬಜಾಜ್, ಐಡಿಎಫ್‌ಸಿ, ಎಚ್‌ಡಿಎಫ್‌ಸಿ ಮತ್ತು ಪೈನ್ ಲ್ಯಾಬ್ಸ್‌ನಿಂದ ವಿಶೇಷ ಹಣಕಾಸು ಕೊಡುಗೆಗಳು ಲಭ್ಯವಿವೆ.

ವಿಶಾಲ ನೆಟ್‌ವರ್ಕ್ ಅನ್ನು ಬಿಪಿಎಲ್ ಹೊಂದಿದೆ

             ಭಾರತದ ಬಹುತೇಕ ಪಿನ್ ಕೋಡ್‌ಗಳನ್ನು ಒಳಗೊಂಡು ಸೇವೆ ಟಚ್ ಪಾಯಿಂಟ್‌ಗಳ ವಿಶಾಲ ನೆಟ್‌ವರ್ಕ್ ಅನ್ನು ಬಿಪಿಎಲ್ ಹೊಂದಿದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನ ಬೆಂಬಲ ಒದಗಿಸಲು ಕಂಪನಿಯು ಪ್ರಮಾಣಿತ ಇಂಜಿನಿಯರುಗಳ ತಂಡವನ್ನು ಹೊಂದಿದೆ.

            ರಿಲಯನ್ಸ್ ರಿಟೇಲ್‌ ವಿಶೇಷವಾಗಿ ಬಿಪಿಎಲ್ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಬಿಪಿಎಲ್ ಎಂಬುದು ಬಿಪಿಎಲ್ ಲಿಮಿಟೆಡ್‌ನ ನೋಂದಾಯಿತ ಟ್ರೇಡ್‌ಮಾರ್ಕ್ ಆಗಿದೆ ಮತ್ತು ರಿಲಯನ್ಸ್ ರಿಟೇಲ್ ಲಿಮಿಟೆಡ್‌ ಲೈಸೆನ್ಸ್ ಅಡಿಯಲ್ಲಿ ಬಳಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries