ಪೆರ್ಲ: ಎಣ್ಮಕಜೆ ಪಂಚಾಯತಿ ರಾಷ್ಟ್ರೀಯ ಕಾಂಗ್ರೆಸ್ ಕಚೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಣ್ಮರೆಯಾದ ದಿನದ ನೆನಪಿನಲ್ಲಿ ಪುಣ್ಯತಿಥಿ ಮತ್ತು ಸಂಸ್ಮರಣೆಯನ್ನು ಮಂಜೇಶ್ವರ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರೀಯ ಕಾಂಗ್ರೆಸ್ ನೇತಾರ, ಡಿಸಿಸಿ ಪ್ರಧಾನ ಕಾರ್ಯದರ್ಶಿ, ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಕರ್ ಜೆ.ಎಸ್. ಮಾತನಾಡಿ ನೇತಾಜಿ ಸುಭಾಷ್ ಚಂದ್ರ ಬೋಸರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅತ್ಯುನತ್ತ ನಾಯಕರಾಗಿದ್ದು ಕಾಂಗ್ರೆಸ್ಸಿನ ಅಧ್ಯಕ್ಷ ಪದವಿಯನ್ನು ಎರಡು ಬಾರಿ ಅಲಂಕರಿಸಿದವರು. ಮಹಾತ್ಮ ಗಾಂಧೀಜಿಯವರ ಜೊತೆ ಸ್ವಾತಂತ್ರ್ಯ ಪಡೆಯುವ ಮಾರ್ಗದ ವಿಷಯದಲ್ಲಿ ಅವರಿಗೆ ಭಿನ್ನಾಭಿಪ್ರಾಯಗಳಿದ್ದುದು ಹೌದಾದರೂ ಗಾಂಧೀಜಿ ಆದಿಯಾಗಿ ಯಾವುದೇ ಕಾಂಗ್ರೆಸ್ಸೀಗರ ಬಗ್ಗೆ ವೈಷಮ್ಯವಿರಲಿಲ್ಲ. ಆದುದರಿಂದಲೇ ಅವರು ತಮ್ಮ ಅಜಾದ್ ಹಿಂದ್ ಫೌಜಿನ ಬ್ರಿಗೇಡ್ಗಳಿಗೆ ನೆಹರು ಬ್ರಿಗೇಡ್ ಗಾಂಧಿ ಬ್ರಿಗೇಡ್ ಎಂಬ ಹೆಸರನ್ನು ಇಟ್ಟಿದ್ದರು ಎಂದು ಹೇಳಿದರು.
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ಸ್ ಅಧ್ಯಕ್ಷ ಇರ್ಷಾದ್ ಮಂಜೇಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿ ಗಾಂಧೀಜಿಯ ಅಹಿಂಸೆ ನಮ್ಮ ಸಿದ್ದಾಂತ. ಅದನ್ನು ಪಾಲಿಸಿ ಆತ್ಮ ರಕ್ಷಣೆಯಲ್ಲಿ ನೇತಾಜಿಯವರಂತೆ ಕಾರ್ಯಾಚರಿಸಬೇಕು ಎಂದು ಯುವ ಕಾಂಗ್ರೆಸಿಗರಿಗೆ ಕರೆ ಇತ್ತರು.
ಕುಂಬಳೆ ಬ್ಲಾಕ್ ರಾಷ್ಟ್ರೀಯ ಕಾಂಗ್ರೆಸ್ ನ ಉಪಾಧ್ಯಕ್ಷ ಲಕ್ಷ್ಮಣ್ ಪ್ರಭು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ತಾಲಿಬಾನ್ ಮಾನವ ವಿರೋಧಿ ಚಿಂತನೆಯವು. ಅವರನ್ನು ಬೆಂಬಲಿಸುವವರು ದೇಶದ್ರೋಹಿಗಳು. ಭಾರತದಲ್ಲಿ ತಾಲಿಬಾನಿ ಮನಸ್ಥಿತಿ ಯಾವುದೇ ಧರ್ಮದಲ್ಲಿ ಯಾವುದೇ ಮತದಲ್ಲಿ ಬೆಳೆದರೂ ಅದರ ವಿರುದ್ಧ ಕಾಂಗ್ರೆಸ್ ಹೋರಾಡುವುದು ಎಂದು ಹೇಳಿದರು.
ಪೈವಳಿಕೆ ಯುವ ಕಾಂಗ್ರೆಸ್ ಅಧ್ಯಕ್ಷ ಭರತರಾಜ , ಕೆಪಿಟಿಎಸ್‍ಎ ನಾಯಕ, ಅಧ್ಯಾಪಕ ನಿರಂಜನ್ ರೈ, ರಾಷ್ಟ್ರೀಯ ಕಾಂಗ್ರೆಸ್ ಎಣ್ಮಕಜೆ ಮಂಡಲ ಉಪಾಧ್ಯಕ್ಷ ರಜಾಕ್ ನಲ್ಕ, ಕೆಎಸ್ ಯು ನೇತಾರ ಮುವಾಫ್ ಕುಂಬಳೆ ಮುಂತಾದವರು ನೇತಾಜಿ ಸುಭಾಷ್ ಚಂದ್ರ ಬೋಸರ ಸಂಸ್ಮರಣೆ ನುಡಿಗಳನ್ನಾಡಿದರು. ಮಂಜೇಶ್ವರ ವಿಧಾನಸಭಾ ಮಂಡಲ ಯುವ ಕಾಂಗ್ರೆಸ್ ಕಾರ್ಯದರ್ಶಿ ಪೃಥ್ವಿರಾಜ್ ಶೆಟ್ಟಿ ಕುಂಬಳೆ ಸ್ವಾಗತಿಸಿ, ಎಣ್ಮಕಜೆ ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ನಿಸಾರ್ ಎಣ್ಮಕಜೆ ವಂದಿಸಿದರು. ಶ್ರೀನಿವಾಸ ಶೆಣೈ ಪೆರ್ಲ, ದಿನೇಶ್ ಶೇಣಿ, ಹನೀಫಾ ಕಾಟುಕುಕ್ಕೆ, ಲತೀಫ್ ಪೆರ್ಲ ಸಚ್ಚಿದಾನಂದ ರೈ ಪೈವಳಿಕೆ, ಅನಿಲ್ ಸೋಮಾಜೆ, ರಾಘವೇಂದ್ರ ಶೇಣಿ, ಸಾದಿಕ್ ನಲ್ಕ, ರಫೀಕ್, ಸಾಲಿ ಅಡ್ಕ, ಮುಷೀರ್ ಕೆ ಎಸ್ ಯು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.