ತಿರುವನಂತಪುರಂ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಹೆಮ್ಮೆಯ ಮಲಯಾಳಿ ಪಿ. ಆರ್. ಶ್ರೀಜೇಶ್ ಅವರಿಗೆ ಸಂಬಂಧಿಸಿದಂತೆ ಕೆ.ಎಸ್.ಆರ್.ಟಿ. ಸಿ. ಕ್ರೀಡಾ ಪಟುವಿನ ಸಾಧನೆಗಳು ಮತ್ತು ಕ್ರೀಡಾ ಚಿತ್ರಗಳನ್ನು ಬಸ್ಸಿನ ಎರಡೂ ಬದಿಗಳಲ್ಲಿ ಚಿತ್ರಿಸಿ ಗೌರವ ಅಭಿನಂದನೆ ಸಲ್ಲಿಸಿದೆ. ಮುಂದಿನ ದಿನಗಳಲ್ಲಿ 'ಶ್ರೀಜೇಶ್ ಇಂಡಿಯಾಸ್ ಪ್ರೈಡ್' ಎಂಬ ಘೋಷವಾಕ್ಯವಿರುವ ಬಸ್ ತಿರುವನಂತಪುರ ಜಿಲ್ಲೆಯ ವಿವಿಧೆಡೆ ಪ್ರಯಾಣಿಸಲಿದೆ. ಕೆಎಸ್‍ಆರ್‍ಟಿಸಿ ಸಿಟಿ ಡಿಪೆÇೀ, ತಿರುವನಂತಪುರಂ ಬಸ್ ಸಂಖ್ಯೆ ಅ466 ನಗರದಲ್ಲಿ ಸಂಚರಿಸುತ್ತಿದ್ದು ಮೊದಲ ಅಭಿನಂದನೆ ಈ ಬಸ್ ನಲ್ಲಿ ಚಿತ್ರಿಸಲಾಗಿದೆ.
ಪುರುಷರ ಹಾಕಿಯಲ್ಲಿ ದೇಶಕ್ಕಾಗಿ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದ ತಂಡದ ಸದಸ್ಯ ಪಿ.ಆರ್.ಶ್ರೀಜೇಶ್ ಅವರ ಸಾಧನೆಗಳು ಹೊಸ ಪೀಳಿಗೆಗೆ ಸ್ಫೂರ್ತಿ ನೀಡುವಂತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆ. ಎಸ್. ಆರ್. ಟಿ. ಸಿ ಬಸ್ ನ್ನು ವಾಣಿಜ್ಯ ವಿಭಾಗದ ಉದ್ಯೋಗಿಗಳು ಸಿದ್ಧಪಡಿಸಿದ್ದಾರೆ. ಬಸ್ಸಿನ ವಿನ್ಯಾಸವನ್ನು ಸಂಪೂರ್ಣವಾಗಿ ಉದ್ಯೋಗಿ ಎಕೆ ಶಿನು ಮಾಡಿದ್ದಾರೆ. ಸಿಟಿ ಡಿಪೆÇೀದ ಉದ್ಯೋಗಿಗಳಾದ ಮಹೇಶ್ ಕುಮಾರ್, ನವಾಜ್ ಮತ್ತು ಅಮೀರ್ ಬಸ್ ನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಪಿಆರ್ ಶ್ರೀಜೇಶ್ ಮ್ಯಾನುಯೆಲ್ ಫ್ರೆಡೆರಿಕ್ ಎಂಬ ಮಲಯಾಳಿ ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಮಲಯಾಳಿ. 48 ವರ್ಷಗಳ ದೀರ್ಘ ಕಾಯುವಿಕೆ ನಂತರ ರಾಜ್ಯಕ್ಕೆ ಇಂತಹದೊಂದು ಸಾಧನೆ ಸಾಕಾರಗೊಂಡಿದೆ. ಟೋಕಿಯೊದಲ್ಲಿ ಅನೇಕ ಪಂದ್ಯಗಳಲ್ಲಿ ಭಾರತದ ಯಶಸ್ಸಿಗೆ ಅವರ ಅತ್ಯುತ್ತಮ ಆಟಗಳು ನಿರ್ಣಾಯಕವಾಗಿದ್ದವು.