ಉಪ್ಪಳ: ಸ್ವಾತಂತ್ರ್ಯ ದಿನಾಚರಣೆಯ 75ನೇ ದಿನಾಚರಣೆಯ ಹೊತ್ತಿಗೆ ಸ್ವಾತಂತ್ರ್ಯದ ಅರ್ಥವೇ ಪ್ರಶ್ನಾರ್ಹವೆಂಬಂತೆ ವ್ಯಕ್ತಿಗಳು, ಅಧಿಕಾರಿಗಳು ಬದಲಾಗಿರುವರೇ ಎಂಬ ಸಂಶಯ ಇಲ್ಲಿ ಮೂಡಿಬಂದಿದೆ. ಪೈವಳಿಕೆ ಬಾಯಾರು ಗ್ರಾಮ ಕಚೇರಿಯಲ್ಲಿ ಧ್ವಜಸ್ತಂಭವಿದ್ದರೂ, ಕಿಟಕಿಯಲ್ಲಿ ಧ್ವಜ ಹಾರಿಸಿರುವುದು ಕಂಡುಬಂದಿದ್ದು ತೀವ್ರ ಟೀಕೆಗೊಳಗಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯಾಂಗದ ಪ್ರಧಾನ ಭಾಗವಾದ ಕಂದಾಯ ಇಲಾಖೆಯ ಗ್ರಾಮ ಕಚೇರಿಗಳಲ್ಲೇ ಈರೀತಿಯ ಲೋಪ ಕಂಡುಬಂದಿರುವುದು ಆಶ್ಚರ್ಯ ಮೂಡಿಸಿದೆ. ಕಚೇರಿಯ ಎದುರು ಧ್ವಜಸ್ತಂಭವಿದ್ದರೂ ಅದನ್ನು ಬಳಸದೆ ಕಿಟಕಿಯಲ್ಲಿ ಧ್ವಜಾರೋಹಣಗೈದಿರುವುದು ಕಚೇರಿಯ ಅಧಿಕೃತರ ಅನಾಸ್ಥೆಯ ಸಂಕೇತವಾಗಿದ್ದು, ಸ್ಥಳೀಯರು ರೋಷವ್ಯಕ್ತಪಡಿಸಿದ್ದಾರೆ.