ಕಣ್ಣೂರು: ಕಣ್ಣೂರಿನಲ್ಲಿ ಇಬ್ಬರು ಐಎಸ್ ತಂಡದ ಮಹಿಳೆಯರನ್ನು ಬಂಧಿಸಲಾಗಿದ್ದು, ತನಿಖೆ ವೇಳೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಬಂಧಿತ ಮಿಸಾ ಸಿದ್ದೀಕ್ ಮತ್ತು ಶಿಫಾ ಹ್ಯಾರಿಸ್ ಐಸಿಸ್ ಜೊತೆ ನಿಕಟ ಸಂಬಂಧ ಹೊಂದಿದ್ದರು ಎಂದು ಎನ್.ಐ.ಎ ಹೇಳಿದೆ. ಮೊಹಮ್ಮದ್ ಅಮೀನ್ ಅವರ ಸೂಚನೆಗಳ ಮೇರೆಗೆ ಅವರು ಕಾರ್ಯನಿರ್ವಹಿಸುತ್ತಿದ್ದರು, ಅವರು ಕೇರಳದಲ್ಲಿ ಐಎಸ್‍ನ ಚಟುವಟಿಕೆಗಳನ್ನು ಸಂಘಟಿಸಲು ನಿಯುಕ್ತರಾಗಿದ್ದರೆಂದು ತಿಳಿದುಬಂದಿದೆ.
ಟೆಲಿಗ್ರಾಮ್, ಹೂಪ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ಐಎಸ್ ಸಂದೇಶಗಳನ್ನು ಹರಡಲು ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಐಎಸ್‍ಗಾಗಿ ಹೊಸ ಸದಸ್ಯರನ್ನು ನೇಮಿಸಿಕೊಳ್ಳಲು ಕೆಲಸ ಮಾಡುತ್ತಿದ್ದರು. ಮಿಸಾ ಸಿದ್ದೀಕ್ ಇತರ ಭಯೋತ್ಪಾದಕರೊಂದಿಗೆ ಟೆಹ್ರಾನ್ ಗೆ ತೆರಳಿದ್ದಳು. ಸಿರಿಯಾ ತಲಪಲು ಉದ್ದೇಶಿಸಲಾಗಿತ್ತು. ಮಿಸಾ ಸಿದ್ದೀಕ್ ಅವರು ನಿಕಟ ಸಂಬಂಧಿಗಳಾದ ಮುಶಾಬ್ ಅನ್ವರ್ ಮತ್ತು ಶಿಫಾ ಹ್ಯಾರಿಸ್ ಅವರನ್ನು ಐಎಸ್ ಹತ್ತಿರ ತರುವಲ್ಲಿ ಕಾರಣಳಾದಳು.
ಕಾಶ್ಮೀರಿ ಪ್ರಜೆ ಮೊಹಮ್ಮದ್ ವಕಾರ್ ಗೆ ಭಯೋತ್ಪಾದಕ ನಿಧಿಯನ್ನು ಹಸ್ತಾಂತರಿಸುವಲ್ಲಿ ಶಿಫಾ ಹ್ಯಾರಿಸ್ ಪ್ರಮುಖ ಪಾತ್ರ ವಹಿಸಿದ್ದಾಳೆ ಎಂದು ಎನ್.ಐ.ಎ ಕಂಡುಹಿಡಿದಿದೆ. ಐಎಸ್ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿಗೆ ಹಲವರನ್ನು ಸೇರಿಸಲು ಶಿಫಾ ಹ್ಯಾರಿಸ್ ಪ್ರಯತ್ನಿಸುತ್ತಿರುವಳೆಂದು ಎನ್.ಐ.ಎ ಹೇಳಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಐಎಸ್ ಸಿರಿಯಾ ಮತ್ತು ಇರಾಕ್ ನಲ್ಲಿ ಕುಸಿದಿದ್ದರೂ, ಐಎಸ್ ಸ್ಲೀಪರ್ ಸೆಲ್ ಗಳು ವಿಶ್ವದ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿವೆ. ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಸೇರಿದಂತೆ ಕೇರಳದ ಅನೇಕ ಜನರು ಐಎಸ್ ನೊಂದಿಗೆ ನಿಕಟ ಸಂಪರ್ಕ ಹೊಮದಿದ್ದಾರೆ. ಗುಪ್ತಚರ ವರದಿಗಳ ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ ಸ್ಲೀಪರ್ ಸೆಲ್‍ಗಳಿವೆ.