ಕಾಸರಗೋಡು: ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಎ.ಟಿ.ಎಂ ಸೇವೆ ಲಭ್ಯವಾಗಿಸುವ ನಿಟ್ಟಿನಲ್ಲಿ ಕೇರಳ ಬ್ಯಾಂಕ್ ಆಯೋಜಿಸಿದ್ದ ಸಂಚಾರಿ ಎ.ಟಿ.ಎಂ ವಾಹನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಕೇರಳ ರಾಜ್ಯ ಕೋ ಓಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೋಟಮುರಿಕ್ಕಲ್ ಸಂಚಾರಿ ವಾಹನಕ್ಕೆ ಧ್ವಜ ಕಾಣಿಸುವ ಮೂಲಕ ಉದ್ಘಾಟಿಸಿದರು. ನಬಾರ್ಡ್ ಡಿಡಿಎಂ ದಿವ್ಯಾ ಅಧ್ಯಕ್ಷತೆ ವಹಿಸಿದ್ದರು. ಕೇರಳ ಬ್ಯಾಂಕ್ ಮ್ಯಾನೇಜಿಂಗ್ ಕಮಿಟಿ ಸದಸ್ಯ ವಕೀಲ ಮಣಿ ವಿತಯತ್ತಿಲ್, ನಿರ್ದೇಶಕ ಬಾಬು ಅಬ್ರಹಾಂ, ಸಿಇಓ ಪಿ.ಎಸ್ ರಾಜನ್, ಕಣ್ಣೂರು ವಲಯ ಪ್ರಬಂಧಕ ಶಿಬು ಎಂ.ಪಿ, ಉಪ ಮಹಾ ಪ್ರಬಂಧಕರಾದ ಶೋಭನನ್ ಟಿ, ನಾರಾಯಣನ್, ಗಿರೀಶ್ ಕುಮಾರ್ ಪಿ.ಎಸ್, ಸಊರಜ್ ಕೆ. ಉಪಸ್ಥಿತರಿದ್ದರು.