ತಿರುವನಂತಪುರ: ಅಗ್ನಿಶಾಮಕ ದಳದ ಮುಖ್ಯಸ್ಥೆ ಬಿ ಸಂಧ್ಯಾ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಅವರು ಡಿಜಿಪಿ ಮತ್ತು ಅಗ್ನಿಶಾಮಕ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ. ಸಂಧ್ಯಾ ಅವರಿಗೆ ಡಿಜಿಪಿ ಶ್ರೇಣಿಯನ್ನು ನೀಡಬೇಕು ಎಂದು ಡಿಜಿಪಿ ಅನಿಲ್ ಕಾಂತ್ ಸರ್ಕಾರಕ್ಕೆ ಶಿಫಾರಸು ಮಾಡಿರುವರು.
ಪೋಲೀಸ್ ಮುಖ್ಯಸ್ಥರ ನೇಮಕಾತಿಯಲ್ಲಿ ಹಿರಿತನವನ್ನು ಪರಿಗಣಿಸಿಲ್ಲ ಎಂಬ ಟೀಕೆಯ ಮಧ್ಯೆ ಈ ಆದೇಶ ನೀಡಲಾಗಿದೆ. ಎಡಿಜಿಪಿಯಾದ ಅನಿಲ್ ಕಾಂತ್ ಅವರನ್ನು ಪೋಲೀಸ್ ಮುಖ್ಯಸ್ಥರಾಗಿ ಆಯ್ಕೆಮಾಡಿ ಡಿಜಿಪಿ ಪದವಿ ನೀಡಲಾಗಿತ್ತು. ಆದರೆ ಬಿ.ಸಂಧ್ಯಾರಿಗೆ ಈ ಪದವಿ ನೀಡಬೇಕಿತ್ತೆಂದು ವಿವಾದಗಳೆದ್ದಿದ್ದವು.
ಇದರೊಂದಿಗೆ ಸಂಧ್ಯಾರ ಜೂನಿಯರ್ ಆಗಿದ್ದ ಅನಿಲ್ ಕಾಂತ್ ಅವರನ್ನು ಡಿಜಿಪಿ ಶ್ರೇಣಿ ಮತ್ತು ಹಿರಿಯರಾದ ಸಂಧ್ಯಾ ರಿಗೆ ಎಡಿ ಜಿಪಿ ಶ್ರೇಣಿ ಎಂಬ ತಾರಮ್ಯ ಉಂಟಾಯಿತು. ಸುದೇಶಕುಮಾರ್, ಬಿ. ಸಂಧ್ಯಾ ಅವರನ್ನು ಹೊರತುಪಡಿಸಿ, ಕಿರಿಯರಾದ ಅನಿಲ್ ಕಾಂತ್ ಅವರನ್ನು ಪೋಲೀಸ್ ಮುಖ್ಯಸ್ಥರನ್ನಾಗಿಸಿದೆ.