ನವದೆಹಲಿ: 'ಜೂನ್ ತಿಂಗಳಲ್ಲಿ ಶೇ 9.17ರಷ್ಟಿದ್ದ ಭಾರತದ ನಿರುದ್ಯೋಗ ದರ ಜುಲೈ ತಿಂಗಳಲ್ಲಿ ಶೇ 6.95ಕ್ಕೆ ಇಳಿದಿದೆ' ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಮಾಹಿತಿ ನೀಡಿದೆ.
ಮೇ ತಿಂಗಳಿನಿಂದ ಸೋಂಕು ಕಡಿಮೆಯಾದ ನಂತರ ಎಲ್ಲ ರಾಜ್ಯಗಳೂ ಲಾಕ್‌ಡೌನ್ ತೆರೆವುಗೊಳಿಸಿದವು. ಹೀಗಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಬಹುತೇಕ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ ಎಂದು ಅದು ಹೇಳಿದೆ.