ನವದೆಹಲಿ: ತಾಲೀಬಾನ್ ಉಗ್ರ ಸಂಘಟನೆ ಆ.29 ರಂದು ಕಾಬೂಲ್ ವಿಮಾನ ನಿಲ್ದಾಣಕ್ಕೆ ಪ್ರವೇಶವನ್ನು ನಿರ್ಬಂಧಿಸಿದೆ ಮುಚ್ಚಿದೆ.
ನ್ಯಾಟೋದ ಪಡೆಯ ಅಂತಿಮ ಹಂತದ ಸ್ಥಳಾಂತರಿಸುವಿಕೆ ವಿಮಾನ ಅಫ್ಘಾನಿಸ್ತಾನದಿಂದ ತೆರಳುತ್ತಿದ್ದಂತೆಯೇ, ದೇಶ ತೊರೆಯಲು ಮುಂದಾಗುವ ಬೃಹತ್ ಪ್ರಮಾಣದ ಜನಸಂಖ್ಯೆಯನ್ನು ನಿಯಂತ್ರಿಸಲು ತಾಲೀಬಾನ್ ಕಾಬೂಲ್ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ನಿರ್ಬಂಧ ವಿಧಿಸಿದೆ.
ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಚೆಕ್ ಪಾಯಿಂಟ್ ಗಳನ್ನು ಹಾಕಲಾಗಿದ್ದು, ಈ ಪೈಕಿ ಕೆಲವು ಪ್ರದೇಶಗಳಲ್ಲಿ ನೈಟ್ ವಿಷನ್ ಗಾಗಲ್ಸ್ ನ್ನು ಹಾಕಿದ್ದ ಕೆಲವು ತಾಲಿಬಾನಿ ಉಗ್ರರನ್ನು ಆಫ್ಘಾನ್ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.
ಆ.31 ರ ವೇಳೆಗೆ ಆಫ್ಘಾನಿಸ್ತಾನದಿಂದ ತಮ್ಮ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಅಮೆರಿಕ-ಬ್ರಿಟನ್ ಗಳಿಗೆ ತಾಲಿಬಾನಿಗಳು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಜೊತೆಗೆ ಬ್ರಿಟನ್ ಸಹ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಳ್ಳುತ್ತಿದೆ. ಅಫ್ಘಾನಿಸ್ತಾನದಿಂದ ಜನರನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಶತ ಪ್ರಯತ್ನ ಮಾಡುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಈ ನಡುವೆ ಆಫ್ಘಾನಿಸ್ತಾನದಿಂದ ಇಟಾಲಿಯ ರಕ್ಷಣಾ ವಿಮಾನವೂ ರೋಮ್ ಗೆ ತಲುಪಿದೆ.
ಈ ನಡುವೆ ಅಫ್ಘಾನಿಸ್ತಾನದ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದ ಬಾಂಬ್ ಸ್ಫೋಟದ ಮಾದರಿಯಲ್ಲೇ ಮತ್ತೊಂದು ಸ್ಫೋಟ ನಡೆಯಬಹುದು ಎಂದು ಅಮೆರಿಕ ಎಚ್ಚರಿಸಿದೆ.