ಮಂಜೇಶ್ವರ: ಮಂಜೇಶ್ವರ ಸಂಯುಕ್ತ ಜಮಾಅತ್ ವತಿಯಿಂದ ಮಂಜೇಶ್ವರ ಮೈಮೂನ ಮದ್ರಸ ಸಭಾಂಗಣದಲ್ಲಿ ಶುಕ್ರವಾರ ನೂತನವಾಗಿ ಆಯ್ಕೆಗೊಂಡ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ರವರಿಗೆ ಸನ್ಮಾನ ಹಾಗೂ ಇತ್ತೀಚೆಗೆ ನಿಧನರಾದ ವಿವಿಧ ಜಮಾಅತ್ ಅಧ್ಯಕ್ಷರುಗಳ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.
ಕೋವಿಡ್ ಮಾನದಂಡಗಳ ಅನುಸಾರ ಸಯ್ಯದ್ ಸೈಫುಲ್ಲಾ ತಂಙಳ್ ಅÀವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯದ್ ಅತ್ತಾವುಲ್ಲ ತಂಙಳ್ ಎಂ.ಎ. ಉದ್ಯಾವರ ಉದ್ಘಾಟಿಸಿದರು.
ಬಳಿಕ ನೂತನವಾಗಿ ವಿಧಾನ ಸಭೆಗೆ ಆಯ್ಕೆಗೊಂಡ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ರವರನ್ನು ಅತ್ತಾವುಲ್ಲ ತಂಙಳ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬಳಿಕ ಅತ್ತಾವುಲ್ಲ ತಂಙಳ್ ಅವರು ಇತ್ತೀಚೆಗೆ ನಿಧನರಾದ ಉದ್ಯಾವರ ಸಾವಿರ ಜಮಾಅತ್ ಅಧ್ಯಕ್ಷ ಸೂಫಿ ಹಾಜಿ, ಅರಿಮಲೆ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಕಾಯಿಂಞÂ ಹಾಜಿ ಹಾಗೂ ಪುಚ್ಚತ್ತಬೈಲ್ ಜಮಾಅತ್ ಅಧ್ಯಕ್ಷ ಮೋನು ಹಾಜಿ ಅವರುಗಳ ಸಂಸ್ಮರಣೆ ನಡೆಸಿದರು.
ಸಂಯುಕ್ತ ಜಮಾಅತ್ ಸೆಲ್ ಕಮಿಟಿ ಪದಾಧಿಕಾರಿಗಳಾದ ಬಿ ಎಸ್ ಇಬ್ರಾಹಿಂ, ಆರ್ ಕೆ ಬಾವ ಹಾಜಿ, ಪಿ ಎಚ್ ಅಬ್ದುಲ್ ಹಮೀದ್, ಕೆಎಸ್ಸಾರ್ಟಿಸಿ ಪುತ್ತುಚ್ಚ, ಅದ್ರಾಮ ಹಾಜಿ ಮೊದಲಾದವರು ಮುಂದಾಳತ್ವ ನೀಡಿದರು. ಸಂಯುಕ್ತ ಜಮಾಅತಿಗೊಳಪಟ್ಟ ಎಲ್ಲಾ ಜಮಾಅತಿನ ಪ್ರತಿನಿಧಿಗಳು ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಉಮ್ಮರ್ ಹಾಜಿ ಸ್ವಾಗತಿಸಿ, ಕೋಶಾಧಿಕಾರಿ ಇಬ್ರಾಹಿಂ ಪೊಡಿಮೋನು ವಂದಸಿದರು.