HEALTH TIPS

ಹೊಸ ಡ್ರೋನ್ ನಿಯಮಕ್ಕೆ ಕೇಂದ್ರ ಸರ್ಕಾರ ಅಸ್ತು; ಹಲವು ನಿಯಮಗಳಲ್ಲಿ ಸಡಿಲಿಕೆ ಇನ್ನು ಭದ್ರತಾ ಅನುಮತಿ ಬೇಕಿಲ್ಲ

            ನವದೆಹಲಿ: ಡ್ರೋನ್ ಕ್ಷೇತ್ರದಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ನಿಯಮಗಳನ್ನು ಸಡಿಲಿಸಿ ಗುರುವಾರ ಆದೇಶ ಹೊರಡಿಸಿದೆ. ಈ ಮೊದಲು ಡ್ರೋನ್​ಗಳ ನೋಂದಣಿ ಅಥವಾ ಲೈಸೆನ್ಸ್ ನೀಡಿಕೆಗೂ ಮೊದಲು ಪಡೆಯಬೇಕಿದ್ದ ಭದ್ರತಾ ಅನುಮತಿಯನ್ನು ರದ್ದು ಮಾಡಲಾಗಿದೆ. ಡ್ರೋನ್​ಗಳ ಕಾರ್ಯಾಚರಣೆ ಶುಲ್ಕವನ್ನೂ ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ. ಸರಳೀಕೃತ ಮಾರ್ಗಸೂಚಿ ಅನ್ವಯ, ಸರಕುಗಳ ಪೂರೈಕೆಗಾಗಿ ಡ್ರೋನ್ ಕಾರಿಡಾರ್​ಗಳನ್ನು ನಿರ್ವಿುಸಲಾಗುತ್ತದೆ. 2021ರ ಡ್ರೋನ್ ನಿಯಮ ಅನ್ವಯ ಡ್ರೋನ್​ಗಳು ಒಯ್ಯಬಹುದಾದ ಸರಕಿನ ಭಾರದ ಮಿತಿಯನ್ನು 300 ಕೆಜಿಯಿಂದ 500 ಕೆಜಿಗೆ ಏರಿಸಲಾಗಿದೆ. ಹೆವಿ ಪೇಲೋಡ್ ಒಯ್ಯುವ ಹಾಗೂ ಡ್ರೋನ್ ಟ್ಯಾಕ್ಸಿಗಳಿಗೆ ಇದು ಅನ್ವಯವಾಗುತ್ತದೆ.

            ಆನ್​ಲೈನ್ ನೋಂದಣಿ: ಎಲ್ಲ ಬಗೆಯ ಡ್ರೋನ್​ಗಳನ್ನು ಡಿಜಿಟಲ್ ಸ್ಕೈ ವೇದಿಕೆ ಮೂಲಕ ಆನ್​ಲೈನ್​ನಲ್ಲಿ ನೋಂದಾಯಿಸಲು ಸಾಧ್ಯವಿದೆ. ಡ್ರೋನ್​ಗಳ ವರ್ಗಾವಣೆ ಮತ್ತು ಡಿ-ರಿಜಿಸ್ಟ್ರೇಶನ್​ಗೆ ನಿಯಮವನ್ನು ಸರಳೀಕರಿಸಲಾಗಿದೆ.

          ಗರಿಷ್ಠ 1 ಲಕ್ಷ ರೂ. ದಂಡ: 2021ರ ಡ್ರೋನ್ ನಿಯಮಗಳಡಿ, ಯಾವುದೇ ನಿಯಮಗಳ ಉಲ್ಲಂಘನೆಗಾಗಿ ವಿಧಿಸುವ ದಂಡ ಶುಲ್ಕವನ್ನು ಗರಿಷ್ಠ ಒಂದು ಲಕ್ಷ ರೂ.ಗೆ ಇಳಿಸಲಾಗಿದೆ. ಆದರೆ, ಇತರ ಕಾನೂನುಗಳ ಉಲ್ಲಂಘನೆಗೆ ಇದು ಅನ್ವಯವಾಗುವುದಿಲ್ಲ. ಹಸಿರು, ಹಳದಿ ಮತ್ತು ಕೆಂಪು ವಲಯಗಳುಳ್ಳ ಇಂಟರ್ಯಾಕ್ಟಿವ್ ಏರ್​ಸ್ಪೇಸ್ ನಕ್ಷೆಯನ್ನು ಡಿಜಿಟಲ್ ಸ್ಕೈ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತದೆ. ಹಳದಿ ವಲಯವನ್ನು ವಿಮಾನ ನಿಲ್ದಾಣ ಪರಿಧಿ ಯಿಂದ 45 ಕಿಲೋ ಮೀಟರ್​ನಿಂದ 12 ಕಿಲೋ ಮೀಟರ್​ಗೆ ಇಳಿಸಲಾಗಿದೆ.

           ಅನುಮತಿ ಬೇಕಿಲ್ಲ: ಹಸಿರು ವಲಯದಲ್ಲಿ ಮತ್ತು ವಿಮಾನ ನಿಲ್ದಾಣದ ಪರಿಧಿಯ 8ರಿಂದ 12 ಕಿ.ಮೀ. ನಡುವಿನ ಪ್ರದೇಶದಲ್ಲಿ 200 ಅಡಿ ಎತ್ತರದವರೆಗೆ ಡ್ರೋನ್ ಹಾರಿಸಲು ಅನುಮತಿಯ ಅಗತ್ಯವಿಲ್ಲ ಎಂದು ಪರಿಷ್ಕೃತ ನಿಯಮ ಹೇಳಿದೆ.

             ಹೊಸ ಡ್ರೋನ್ ನಿಯಮ ಈ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿದೆ. ಪರವಾನಗಿ, ನೋಂದಣಿ ಇನ್ನಿತರ ಪ್ರಕ್ರಿಯೆಗಳನ್ನು ಅತ್ಯಂತ ಸರಳ ಮಾಡಲಾಗಿದೆ. ಸ್ಟಾರ್ಟಪ್, ಹೊಸ ಸಂಶೋಧನೆ, ಹೊಸ ಅವಕಾಶಗಳಿಗೆ ಈ ನಿಮಯ ಅನುಕೂಲಕರವಾಗಿದೆ. ಯುವಕರಿಗೆ ಇದರಿಂದ ಹೆಚ್ಚಿನ ಅವಕಾಶ ಸಿಗಲಿದೆ.

            ವಿಶ್ವದಾದ್ಯಂತ ಏರ್ ಟ್ಯಾಕ್ಸಿ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಭಾರತದಲ್ಲಿ ಹೊಸ ಡ್ರೋನ್ ನೀತಿಯಿಂದ ಇದು ಸಾಕಾರಗೊಳ್ಳುವ ನಿರೀಕ್ಷೆ ಇದೆ. ಈಗಿರುವ ಊಬರ್ ಟ್ಯಾಕ್ಸಿ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ಏರ್ ಟ್ಯಾಕ್ಸಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಹೊಸ ಡ್ರೋನ್ ನೀತಿ ಸಹಕಾರಿಯಾಗಿದೆ.

| ಜ್ಯೋತಿರಾದಿತ್ಯ ಸಿಂಧಿಯಾ ನಾಗರಿಕ ವಿಮಾನಯಾನ ಸಚಿವ

                     ಯಾವ ದಾಖಲೆ ಅನಗತ್ಯ?

  • ವಿಶಿಷ್ಟ ಅಧಿಕೃತ ಸಂಖ್ಯೆ (ಯುಎಎನ್)
  • ವಿಶಿಷ್ಟ ಪ್ರೊಟೊಟೈಪ್ ಗುರುತು ಸಂಖ್ಯೆ
  • ಅನುಸರಣೆ ಮತ್ತು ನಿರ್ವಹಣೆ ಪ್ರಮಾಣಪತ್ರಗಳು
  • ಆಪರೇಟರ್ ಪರ್ವಿುಟ್
  • ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧಿಕೃತತೆ
  • ರಿಮೋಟ್ ಪೈಲಟ್ ಬೋಧನಾ ಅನುಮತಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries