ತಿರುವನಂತಪುರಂ: ಓಣಂ ನಂತರವೂ ಪಡಿತರ ಚೀಟಿದಾರರು ಓಣಂ ಕಿಟ್ ಖರೀದಿಸಲು ಸಾಧ್ಯವಿದೆ ಎಂದು ಆಹಾರ ಸಚಿವ ಜಿಆರ್ ಅನಿಲ್ ಹೇಳಿರುವರು. ನಿನ್ನೆಯ ಹೊತ್ತಿಗೆ, 61 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಓಣಂ ಕಿಟ್ ವಿತರಿಸಲಾಗಿದೆ. ಇದು ಇಂದಿನ ವೇಳೆಗೆ 70 ಲಕ್ಷ ದಾಟುವ ನಿರೀಕ್ಷೆಯಿದೆ. ರಾಜ್ಯದ ಜನರು ಇನ್ನೂ ಕಿಟ್ ಗಳನ್ನು ಸ್ವೀಕರಿಸಲು ಬಾಕಿಯಿರುವ ಕಾರಣ ಓಣಂ ನಂತರ ಕಿಟ್ ಗಳನ್ನು ವಿತರಿಸಲಾಗುವುದು ಎಂದು ಸಚಿವರು ಹೇಳಿದರು.
ಓಣಂ ಗೂ ಮೊದಲು ಕಿಟ್‍ಗಳನ್ನು ಜನರಿಗೆ ವಿತರಿಸಿಲ್ಲ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಸುಮಾರು 30 ಲಕ್ಷ ಜನರಿಗೆ ಇನ್ನೂ ಕಿಟ್ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಐಪೆÇೀಸ್ ಯಂತ್ರ ವ್ಯವಸ್ಥೆಯು ಕಿಟ್ ಸ್ಟಾಕ್‍ನಲ್ಲಿದೆ ಎಂದು ಹೇಳುತ್ತದೆ. ಆದರೆ ಅಂಗಡಿಗಳಿಗೆ ತಲುಪಿಸಲಾಗಿಲ್ಲ ಎಂದು ಪಡಿತರ ವ್ಯಾಪಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಹಾರ ಸಚಿವರು ಸರ್ಕಾರದ ಮರ್ಯಾದೆ ಉಳಿಸಲು ಹೊಸ ಕ್ರಮಗಳನ್ನು ಕೈಗೊಂಡಿದ್ದಾರೆ.