HEALTH TIPS

ರಾಜ್ಯಗಳಾದ್ಯಂತ ವೈಯಕ್ತಿಕ ವಾಹನಗಳ ಸುಗಮ ವರ್ಗಾವಣೆಗೆ ಹೊಸ ನೋಂದಣಿ ಗುರುತು

                  ನವದೆಹಲಿ :ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವೈಯಕ್ತಿಕ ವಾಹನಗಳ ವರ್ಗಾವಣೆಯನ್ನು ಸುಗಮಗೊಳಿಸಲು ಹೊಸ ನೋಂದಣಿ ಗುರುತನ್ನು ಕೇಂದ್ರ ಸರಕಾರವು ಶನಿವಾರ ಅನಾವರಣಗೊಳಿಸಿದೆ.

           ಸರಕಾರದ ಈ ಕ್ರಮದಿಂದ ದೇಶದೊಳಗೆ ಆಗಾಗ್ಗೆ ಸ್ಥಳಾಂತರಗೊಳ್ಳುವವರಿಗೆ ಲಾಭವಾಗಲಿದೆ. ಅವರು ಬಿಎಚ್ ಸರಣಿ ಅಥವಾ ಬಿಎಚ್ ನೋಂದಣಿ ಗುರುತನ್ನು ಪಡೆದುಕೊಂಡರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ತಮ್ಮ ವಾಹನಗಳ ಮರುನೋಂದಣಿ ಮಾಡಿಸುವ ಅಗತ್ಯವಿರುವುದಿಲ್ಲ.
            ಹಾಲಿ ವ್ಯಕ್ತಿಯೋರ್ವ ತನ್ನ ವಾಹನವನ್ನು ಬೇರೊಂದು ರಾಜ್ಯದಲ್ಲಿ ಕೇವಲ 12 ತಿಂಗಳ ಅವಧಿಗೆ ಇಟ್ಟುಕೊಳ್ಳಬಹುದು. ಈ ಅವಧಿ ಮುಗಿದ ಬಳಿಕ ಆತ ವಾಹನಕ್ಕೆ ಮತ್ತೊಮ್ಮೆ ನೋಂದಣಿ ಪ್ರಕ್ರಿಯೆಯನ್ನು ಮಾಡಿಸಬೇಕಾಗುತ್ತದೆ.
              ವಾಹನಗಳ ಮರುನೋಂದಣಿಯನ್ನು ಕಡ್ಡಾಯಗೊಳಿಸಿರುವ ಈಗಿನ ನಿಯಮವು ಆಗಾಗ್ಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ಥಳಾಂತರಗೊಳ್ಳುವವರಿಗೆ ಅನಾನುಕೂಲವನ್ನುಂಟು ಮಾಡುತ್ತಿತ್ತು ಎಂದು ಹೇಳಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು,ಹೊಸ ನೋಂದಣಿ ಸೌಲಭ್ಯವು ಇಂತಹ ಕಳವಳಗಳನ್ನು ನಿವಾರಿಸಲು ನೆರವಾಗುತ್ತದೆ ಎಂದು ತಿಳಿಸಿದೆ. ಹೊಸ ನೋಂದಣಿ ಗುರುತು ಬಿಎಚ್ ಸರಣಿ ಸೆ.15ರಿಂದ ಜಾರಿಗೊಳ್ಳಲಿದೆ.

          ರಕ್ಷಣಾ ಸಿಬ್ಬಂದಿಗಳು,ಕೇಂದ್ರ/ರಾಜ್ಯ ಸರಕಾರಗಳ,ಕೇಂದ್ರ/ರಾಜ್ಯ ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಮತ್ತು ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿರುವ ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗಿಗಳು ಸ್ವಯಂಪ್ರೇರಿತವಾಗಿ ಬಿಎಚ್ ಸರಣಿಯಡಿ ತಮ್ಮ ವಾಹನಗಳ ನೋಂದಣಿಯನ್ನು ಮಾಡಿಸಿಕೊಳ್ಳಬಹುದು ಎಂದು ಸಚಿವಾಲಯವು ತಿಳಿಸಿದೆ.

            ವಾಹನಗಳಿಗೆ ಎರಡು ವರ್ಷಗಳಿಗೆ ಅಥವಾ ಅದರ ಗುಣಕಗಳ ಅವಧಿಗೆ ತೆರಿಗೆಯನ್ನು ವಿಧಿಸಲಾಗುವುದು. 14 ವರ್ಷಗಳು ಪೂರ್ಣಗೊಂಡ ಬಳಿಕ ಈ ವಾಹನಗಳಿಗೆ ಮೊದಲು ಪಾವತಿಸಿದ್ದ ತೆರಿಗೆಯ ಅರ್ಧದಷ್ಟನ್ನು ವಾರ್ಷಿಕವಾಗಿ ವಿಧಿಸಲಾಗುವುದು ಎಂದೂ ಸಚಿವಾಲಯವು ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries