HEALTH TIPS

ಬಸ್ ತಂಗುದಾಣ ಉದ್ಘಾಟನೆ

             ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತಿ ಗುವೇದಪಡ್ಪು ಬಳಿಯ ಗುರುಕುಮೇರು ಮುಗುಳಿ ಎಂಬಲ್ಲಿ ದಿ.ಕಮಲ ಮತ್ತು ತುಕ್ರ ನಾಯ್ಕ್ ಸ್ಮರಣಾರ್ಥ ಅವರ ಮನೆಯವರು ಊರಿನವರ ಸಹಕಾರದೊಂದಿಗೆ ನಿರ್ಮಿಸಿದ  ಬಸ್ ತಂಗುದಾಣವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. 

               ಉದ್ಘಾಟನೆಯನ್ನು ನೆರವೇರಿಸಿದ ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ  ಭಾರತಿ ಎಸ್ ರವರು ಮಾತನಾಡಿ, ಸಮಾಜದ ಉನ್ನತಿಗಾಗಿ ಸದಾ ಹಾತೊರೆಯುತ್ತಿದ್ದ ತುಕ್ರ ನಾಯ್ಕ್ ರವರು ಜನಪರ ಕಾಳಜಿಯುಳ್ಳವರಾಗಿದ್ದು, ಊರಿನ ಗ್ರಾಮಸ್ಥರ ಪ್ರೀತಿ ವಿಶ್ವಾಸವನ್ನು ಗಳಿಸಿ ಜನಾನುರಾಗಿಯಾಗಿದ್ದರು. ಅಂತಹ ಮಹಾನ್ ವ್ಯಕ್ತಿಯ ಹೆಸರು ಸದಾ ಜನಮಾನಸದಲ್ಲಿರುವಂತಾಗಲು ಮನೆಯವರು ಸೇರಿ ಊರಿನವರ ಸಹಕಾರದೊಂದಿಗೆ ಅವರ ಹೆಸರಿನಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಿ ಜನತೆಗೆ ಅರ್ಪಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಹೇಳಿದರು.


                    ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಮೊಯಿದಿನ್ ಕುಂಞ ತಲಕ್ಕಿ, ಸ್ಥಳೀಯ ಹಿರಿಯರಾದ ಸುಬ್ರಹ್ಮಣ್ಯ ಭಟ್ ಹಾಗೂ ಸುಬೈರ್ ಮಾಸ್ತರ್ ಶುಭ ಹಾರೈಸಿದರು. ಸಮಾರಂಭದಲ್ಲಿ ಮನೆಯವರಾದ ಗುರುವಪ್ಪ ನಾಯ್ಕ್, ಸತೀಶ್ ಮುಂತಾದವರು ಉಪಸ್ಥಿತರಿದ್ದರು. ಅಹಮ್ಮದ್ ಕುಂಞ ಸ್ವಾಗತಿಸಿ, ಐತಪ್ಪ ನಾಯ್ಕ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries