ಕಾಸರಗೋಡು: ಇಮ್ಮರ್ಷನ್ ಟ್ರೈನಿಂಗ್ ಆನ್ ಲೈನ್ ತರಬೇತಿ ಜರುಗಿತು.
ಉದ್ದಿಮೆ ಇಲಾಖೆ ಜಾರಿಗೊಳಿಸುವ ಕೃಷಿ ವಲಯದ ಮೌಲ್ಯವರ್ಧಿತ ಉತ್ಪನ್ನಗಳ ಉದ್ದಿಮೆಗಳ ಪೆÇ್ರೀತ್ಸಾಹ ಮಾಡುವ ಎರೈಸ್ ಯೋಜನೆಯ ದ್ವಿತೀಯ ಹಂತವಾಗಿ ವಿವಿಧ ಮೌಲ್ಯ ವರ್ಧಿತ ಯೋಜನೆಗಳ ಮಾಹಿತಿ ನೀಡುವ ನಿಟ್ಟಿನಲ್ಲಿ ತರಬೇತಿ ನಡೆಯಿತು.
ಉದ್ದಿಮೆ ಇಲಾಖೆಯ ಪ್ರಭಾರ ಅಡೀಷನಲ್ ಡೈರೆಕ್ಟರ್ ಎಸ್.ಅಜಿತ್ ಉದ್ಘಾಟಿಸಿದರು. ಹಾಲು ಉತ್ಪನ್ನಗಳ ಉದ್ದಿಮೆ ಸಂಬಂಧ ನಡೆದ ತರಬೇತಿಯಲ್ಲಿ 276 ಮಂದಿ ಭಾಗವಹಿಸಿದರು. ಡೈರಿ ಅಭಿವೃದ್ಧಿ ವಿಭಾಗ ಡೆಪ್ಯೂಟಿ ಡೈರೆಕ್ಟರ್ ರಾಮಗೋಪಾಲ್ ಆರ್. ಯೋಜನೆಗಳ ಮಾಹಿತಿ ನೀಡಿದರು. ಉದ್ದಿಮೆ ಇಲಾಖೆಯ ಡೆಪ್ಯೂಟಿ ನಿರ್ದೇಶಕ ಷಬೀರ್ ಮುಹಮ್ಮದ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಜೋಸ್ ಥಾಮಸ್ ವಂದಿಸಿದರು.