HEALTH TIPS

ಕೊರೋನಾ ಮರಣ ವರದಿ ಮಾಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿಲ್ಲ; ಆರೋಗ್ಯ ಸಚಿವೆ

                                                             

                      ತಿರುವನಂತಪುರಂ: ರಾಜ್ಯದಲ್ಲಿ ಕೊರೊನಾ ಸಾವುಗಳನ್ನು ವರದಿ ಮಾಡಲು ಸರ್ಕಾರ ವಿಫಲವಾಗಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಸಾವುಗಳ ಅಂಕಿಅಂಶಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದು ಸಚಿವರು ಹೇಳಿದರು. ವಿಧಾನಸಭೆಯಲ್ಲಿ ಯುಡಿಎಫ್ ಶಾಸಕರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

                     ಆದರೆ ರಾಜ್ಯದಲ್ಲಿ ಕೋವಿಡ್ ಮರಣದ ಲೆಕ್ಕಪರಿಶೋಧನಾ ಸಮಿತಿಯನ್ನು ಸಚಿವರು ಉಲ್ಲೇಖಿಸಿಲ್ಲ. ಸರ್ಕಾರದ ಅಂಕಿಅಂಶಗಳು ಮತ್ತು ಮಾಹಿತಿ ಕೇರಳ ಮಿಷನ್ ಅಂಕಿಅಂಶಗಳ ನಡುವೆ 7000 ದಷ್ಟು ವ್ಯತ್ಯಾಸವಿದೆ ಎಂದು ಪ್ರತಿಪಕ್ಷಗಳು ಕೇಳಿದ್ದವು. ಈ ಪ್ರಶ್ನೆಗೆ ಆರೋಗ್ಯ ಸಚಿವರು ಸ್ಪಷ್ಟ ಉತ್ತರ ನೀಡಲಿಲ್ಲ. ಸ್ಥಳೀಯಾಡಳಿತ ಇಲಾಖೆಯು ನಡೆಸಿದ ಅಧ್ಯಯನವನ್ನು ಪರೀಕ್ಷಿಸಲಾಗಿಲ್ಲ ಎಂದು ಸಚಿವರು ಹೇಳಿದರು.

                    ಇನ್ಪೋರ್ಮೇಶನ್ ಕೇರಳ ಮಿಷನ್ ಪ್ರಕಾರ, ಜನವರಿ 2020 ರಿಂದ ರಾಜ್ಯದಲ್ಲಿ 23486 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಆದರೆ, ಈ ಮೊದಲು ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ 16,170 ಸಾವುಗಳು ಮಾತ್ರ ವರದಿಯಾಗಿವೆ ಎಂದು ಹೇಳಲಾಗಿದೆ. ಇದರಲ್ಲಿ ಬರೋಬ್ಬರಿ 7316 ಕೊರತೆ ಇದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ ಆರೋಗ್ಯ ಸಚಿವರು ಈ ಬಗ್ಗೆ  ಪ್ರತಿಕ್ರಿಯಿಸಲಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries