ತಿರುವನಂತಪುರ: ಕೊರೊನಾ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಘೋಷಿಸಲಾದ ಉಚಿತ ಓಣಂ ಕಿಟ್ ವಿತರಣೆ ಇಂದಿನಿಂದ ಆರಂಭವಾಗಿದೆ. ಏತನ್ಮಧ್ಯೆ, ಆಹಾರ ಇಲಾಖೆಯ ಪ್ರಸ್ತಾಪವು ವಿವಾದಾಸ್ಪದವಾಗಿದೆ. ಸೆಲೆಬ್ರಿಟಿಗಳು ಸೇರಿದಂತೆ ಎಲ್ಲಾ ಪಡಿತರ ಅಂಗಡಿಗಳಲ್ಲಿ ಓಣಂ ಕಿಟ್ ವಿತರಣೆಯ ಪೋಟೋ ತೆಗೆದು ಪೋಸ್ಟರ್ ಹಾಕಬೇಕೆಂಬ ನಿರ್ದೇಶನ ವಿವಾದ ಸೃಷ್ಟಿಸಿದೆ.
ಎಲ್ಲಾ ಪಡಿತರ ಅಂಗಡಿಗಳನ್ನು ಬೆಳಿಗ್ಗೆ ರಾತ್ರಿ 8:30 ಕ್ಕೆ ಉದ್ಘಾಟಿಸಬೇಕು. ಉದ್ಘಾಟನೆಯನ್ನು ಎಂ.ಪಿ, ಎಂಎಲ್‍ಎ ಅಥವಾ ಪಂಚಾಯತಿ ಸದಸ್ಯರು ಹೀಗೆ ಯಾರಾದರೊಬ್ಬರಿಂದ ನಡೆಸಬೇಕು. ಬಳಿಕ ಪೋಸ್ಟರ್ ಅಂಟಿಸುವ ಮುನ್ನ, ಕಿಟ್ ನೀಡವ ಪೋಟೋ ತೆಗೆದು ಅಧಿಕಾರಿಗಳ ವಾಟ್ಸಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಬೇಕೆಂದು ಸ|ಊಚಿಸಲಾಗಿತ್ತು. ಆಯ್ಕೆಯಾದ ಪೋಟೋಕ್ಕೆ ಬಹುಮಾನ ನೀಡಲಾಗುವುದೆಂದೂ ಹೇಳಲಾಗಿತ್ತು.
ಪಡಿತರ ವ್ಯಾಪಾರಿಗಳ ಒಂದು ವಿಭಾಗವು ಆಹಾರ ಇಲಾಖೆಯಿಂದ ನೀಡಲಾದ ಸೂಚನೆಗಳನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಓಣಂ ಕಿಟ್ ವಿತರಣೆಯ ರಾಜ್ಯ ಮಟ್ಟದ ಉದ್ಘಾಟನೆಯನ್ನು ನಿನ್ನೆ ಆಹಾರ ಸಚಿವ ಜಿ. ಆರ್. ಅನಿಲ್ ನಿರ್ವಹಿಸಿದ್ದರು.
ಆದರೆ ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉದ್ಘಾಟನೆಯಂತಹ ಪ್ರಚಾರ ಚಟುವಟಿಕೆ ಅನಗತ್ಯ ಎಂದು ಆರೋಪಿಸಲಾಗಿದೆ. ಘಟನೆ ವಿವಾದಾಸ್ಪದವಾದ ನಂತರ, ಆಹಾರ ಸಚಿವರು ವಿವರಣೆ ನೀಡಿ ಸಮಾರಂಭವನ್ನು ಉದ್ಘಾಟಿಸಲು ಹೇಳಿಲ್ಲ. ಆದರೆ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಗಣ್ಯರು ಹಾಜರಿರಬೇಕು ಎಂದು ಹೇಳಿರುವುದಾಗಿ ಸಮಜಾಯಿಷಿ ನೀಡಿದರು.