ಕಾಸರಗೋಡು: ವಿತರಣೆಗೊಳ್ಳುವ ವೃಕ್ಷವಾಗಿ ಬೆಳೆಯಬಲ್ಲ ಸಸಿಗಳ ಮುಂದಿನ ಹಂತಗಳ ಪೆÇೀಷಣೆಯನ್ನೂ ಖಚಿತಪಡಿಸಬೇಕು ಎಂದು ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಅಭಿಪ್ರಾಯಪಟ್ಟಿದ್ದಾರೆ.
ಬೇಳದಲ್ಲಿ ನಿರ್ಮಿಸಲಾದ ಕಾಸರಗೋಡು ಜಿಲ್ಲಾ ಶಾಶ್ವತ ನರ್ಸರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಅರಣ್ಯೀಕರಣ ಅಂಗವಾಗಿ ವಿತರಣೆ ನಡೆಸಲಾಗುವ ಸಸಿಗಳ ಪುನರ್ ಪೆÇೀಷಣೆ ಖಚಿತಪಡಿಸಲು ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ನಗರವನ, ವಿದ್ಯಾವನ, ಸಂಸ್ಥೆ ವನಿತ್ಯಾದಿ ಯೋಜನೆಗಳನ್ನು ಇಲಾಖೆ ಜಾರಿಗೊಳಿಸುತ್ತಿದೆ. ಕಳೆದ ಅನೇಕ ವರ್ಷಗಳಿಂದ ಅರಣ್ಯ ಇಲಾಖೆ ಕೋಟಿಗಟ್ಟಲೆ ವೃಕ್ಷವಾಗಬಲ್ಲ ಸಸಿಗಳನ್ನು ವಿತರಣೆನಡೆಸುತ್ತಿದೆ. ಅವುಗಳೆಲ್ಲವೂ ಬೆಳೆದು ಮರವಾಗುತ್ತಿದ್ದರೆ ರಾಷಟ್ರೀಯ ಹರಿತ ಟ್ರೈಬ್ಯೂನಲ್ ಆದೇಶಿಸದ ರೀತಿಯ ಒಟ್ಟು ಅರಣ್ಯ ವಿಸ್ತೃತಿಯ ಶೇ 33 ಎಂಬ ಗುರಿಯನ್ನು ಸಾಧಿಸಬಹುದಾಗಿತ್ತು. ಈ ಮೂಲಕ ನೈಸರ್ಗಿಕ ಅರಣ್ಯವಲ್ಲದೆ ಒಂದು ಹಸುರು ಕವಚವೇ ನಿರ್ಮಾಣವಾಗಿ ವಾತಾವರಣ, ವಾಯು ಶುದ್ಧತೆಗೆ ದೊಡ್ಡ ಕೊಡುಗೆಯಾಗುತ್ತಿತ್ತು ಎಂದು ಸಚಿವ ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಬಿ.ಶಾಂತಾ, ಅರಣ್ಯ ಇಲಾಖೆಯ ಉತ್ತರ ವಲಯ ಪ್ರಧಾನ ಕನ್ಸರ್ ವೇಟರ್ ಆಫ್ ಫಾರೆಸ್ಟ್ ಡಿ.ಕೆ.ವಿನೋದ್ ಕುಮಾರ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಉಪಸ್ಥಿತರಿದ್ದರು. ಸಮಾಜ ಅರಣ್ಯೀಕರಣ ವಿಭಾಗ ಕೋಯಿಕೋಡ್ ಫಾರೆಸ್ಟ್ ಕನ್ಸರ್ ವೇಟರ್ ಆರ್.ಕೀರ್ತಿ ಸ್ವಾಗತಿಸಿದರು. ಕಾಸರಗೋಡು ಸಮಾಜ ಅರಣ್ಯೀಕರಣ ವಿಭಾಗ ಸಹಾಯಕ ಫಾರೆಸ್ಟ್ ಕನ್ಸರ್ ವೇಟರ್ ಅಜಿತ್ ಕೆ.ರಾಮನ್ ವಂದಿಸಿದರು.