ತಿರುವನಂತಪುರಂ: ಕೊರೊನಾ ಹರಡುವಿಕೆಯನ್ನು ತಡೆಯುವ ಪ್ರಯತ್ನದ ಭಾಗವಾಗಿ ಪಂಚಾಯತ್ ಮಟ್ಟದಲ್ಲಿ ವ್ಯಾಪಾರಿಗಳ ಸಭೆ ಕರೆಯುವಂತೆ ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಸಭೆಗಳನ್ನು ಸ್ಟೇಷನ್ ಹೌಸ್ ಅಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಲಾಗುತ್ತದೆ. ಅಂಗಡಿಗಳು ಮತ್ತು ವ್ಯಪಾರ ಕೇಂದ್ರಗಳಲ್ಲಿ ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಇಂತಹ ಸಭೆಯ ಉದ್ದೇಶವಾಗಿದೆ. ಮುಂದಿನ ಎರಡು ದಿನಗಳ ಒಳಗೆ ರಾಜ್ಯಾದ್ಯಂತ ಈ ಸಭೆ ನಡೆಯಲಿದೆ.
ಕೊರೋನಾ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಧ್ವನಿವರ್ಧಕದ ಮೂಲಕ ಪ್ರಕಟಣೆಗಳನ್ನು ಸಾರ್ವಜನಿಕವಾಗಿ ಮಾಡಲಾಗುತ್ತದೆ. ಹೌಸಿಂಗ್ ಅಸೋಸಿಯೇಶನ್ ಸಂಘಗಳ ಸಹಾಯದಿಂದ ಜಾಗೃತಿ ಚಟುವಟಿಕೆಗಳನ್ನು ಬಲಪಡಿಸುವ ಯೋಜನೆಗಳೂ ಇವೆ.