ಕಾಸರಗೋಡು: ಕೇರಳ ಶಿಕ್ಷಣ ಸಚಿವ ವಿ.ಶಿವನ್‍ಕುಟ್ಟಿ ರಾಜೀನಾಮೆ ಸಲ್ಲಿಸುವಂತೆ ಆಗ್ರಹಿಸಿ ಯುವಮೋರ್ಚಾ ಕಾಞಂಗಾಡು ಮಂಡಲ ಸಮಿತಿ ವತಿಯಿಂದ ಬುಧವಾರ ಹೊಸದುರ್ಗ ಸಿವಿಲ್ ಸ್ಟೇಶನ್ ವಠಾರದಲ್ಲಿ ಪ್ರತಿಭಟನೆ ನಡೆಯಿತು. ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಮನುಲಾಲ್ ಮೇಲತ್ ಧರಣಿ ಉದ್ಘಾಟಿಸಿ ಮಾತನಾಡಿ, ಬಜೆಟ್ ಮಂಡನೆ ಸಂದರ್ಭ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ನೇತೃಥ್ವ ನೀಡಿರುವ ಹಾಲಿ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿಯನ್ನು ಸಂರಕ್ಷಿಸಿಕೊಂಡು ಬರುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯಕ್ಕೆ ಅಪಮಾನವೆಸಗುತ್ತಿದ್ದಾರೆ. ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಪ್ರಬಂಧಸ್ಪರ್ಧೆಗೆ ಕಮ್ಯೂನಿಸ್ಟ್ ವಿಚಾರಧಾರೆಯ ವಿಷಯ ಹೇರಲು ಮುಂದಾಗಿರುವ ಶಿಕ್ಷಣ ಇಲಾಖೆ, ಸ್ವಾತಂತ್ರ್ಯೋತ್ಸವದ ಚರಿತ್ರೆಗೆ ಮಸಿಬಳಿಯಲು ಮುಂದಾಗಿರುವುದಾಗಿ ದೂರಿದರು.
ಶ್ರೀಜಿತ್ ಪರಕ್ಲಾಯಿ, ಸಾಗರ್ ಚಾತಮತ್ತ್, ಜಿತೇಶ್ ಎನ್, ರಾಹುಲ್ ಪರಪ್ಪ, ಎಂ. ಪ್ರದೀಪ್ ಕುಮಾರ್, ಎಚ್.ಆರ್. ಶ್ರೀಧರನ್ ಉಪಸ್ಥಿತರಿದ್ದರು.