ತಿರುವನಂತಪುರ: ಕೇರಳ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಸಾಹಿತ್ಯ ಪ್ರಶಸ್ತಿ ಘೋಷಿಸಲಾಗಿದೆ. ಉಣ್ಣಿ ಅರಿಂತೆ ವಾಂಕ್ ಅತ್ಯುತ್ತಮ ಸಣ್ಣ ಕಥೆಗಾಗಿ ಪ್ರಶಸ್ತಿ ಗಿಟ್ಟಿಸಿದೆ. . ಪಿಎಫ್ ಮ್ಯಾಥ್ಯೂಸ್ ಅವರ ಅಡಿಯಾಳ ಪ್ರೇತಂ ಅತ್ಯುತ್ತಮ ಕಾದಂಬರಿ ಮತ್ತು ಒ.ಪಿ ಸುರೇಶ್ ಅವರ ತಾಜ್ ಮಹಲ್ ಅತ್ಯುತ್ತಮ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಸೇತು ಮತ್ತು ಪೆರುಂಬಡವಂ ಶ್ರೀಧರನ್ ಅಕಾಡೆಮಿ ಶ್ರೇಷ್ಠ ಪುರಸ್ಕಾರಕ್ಕೂ ಭಾಜನರಾಗಿರುವರು. ಪ್ರಶಸ್ತಿಯು 25,000 ರೂ.ನಗದು ಬಹುಮಾನ, ಫಲಕ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ.
ಕೆಕೆ ಕೋಚ್, ಮಂಪುಜ ಕುಮಾರನ್, ಕೆಆರ್ ಮಲ್ಲಿಕಾ, ಸಿದ್ಧಾರ್ಥನ್ ಪರುತಿಕ್ಕಾಡ್, ಚವರ ಕೆಎಸ್ ಪಿಳ್ಳೈ ಮತ್ತು ಎಂ ಎ ರೆಹಮಾನ್ ಅವರು ಒಟ್ಟಾರೆ ಸಾಹಿತ್ಯ ಕೊಡುಗೆಗಳಿಗಾಗಿ ಪ್ರಶಸ್ತಿಯನ್ನು ಪಡೆದರು. ಶ್ರೀಜಿತ್ ಪೊಯಿಲ್ ಕಾವು ಅವರ ದ್ವಯಂ ನಾಟಕಕ್ಕಾಗಿ ಪ್ರಶಸ್ತಿ ಲಭಿಸಿದೆ.
ಪ್ರಿಯ ಎಎಸ್ ಅವರ ಪೆರುಮಾಳಯತ್ತೆ ಕುಂಜಿತಲುಗಳ್ ಕೃತಿಗೆ ಅತ್ಯುತ್ತಮ ಮಕ್ಕಳ ಸಾಹಿತ್ಯಕ್ಕಾಗಿ ಪ್ರಶಸ್ತಿ ಪಡೆದರು. ವಿಧು ವಿನ್ಸೆಂಟ್ ಅವರ ಪ್ರವಾಸ ಕಥನ ದಿ ಡೇಸ್ ಗಾಡ್ ಹಿಡನ್ ಗೆ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಹಾಸ್ಯ ಸಾಹಿತ್ಯಕ್ಕಾಗಿ ಚಲನಚಿತ್ರ ನಟ ಇನ್ನೋಸೆಂಟ್ ಬರೆದಿರುವ ಇರಿಞಲಕುಡಯಿಲೆಕ್ಕ್ ಚುಟ್ಟುಂ ಎಂಬ ಕೃತಿಗೆ ಪ್ರಶಸ್ತಿ ಲಭಿಸಿದೆ.