ಕಣ್ಣೂರು: ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಅವರೊಂದಿಗೆ ಕುಡಿದ ಮತ್ತಿನಲ್ಲಿ ಕೆಟ್ಟದಾಗಿ ವರ್ತಿಸಿರುವುದಾಗಿ ದೂರಲಾಗಿದೆ. ಮಾವೇಲಿ ಎಕ್ಸ್‍ಪ್ರೆಸ್ ರೈಲಿನ ಎಸಿ ವಿಭಾಗದಲ್ಲಿ ಈ ಘಟನೆ ಸೋಮವಾರ ನಡೆದಿದೆ. ಸಂಸದರು ನೀಡಿದ ದ|ಊರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ರೈಲಿನಲ್ಲಿ ಪ್ರಯಾಣಿಸುವ ವೇಳೆ ಕುಡಿದ ಮತ್ತಿನಲ್ಲಿದ್ದ ಇಬ್ಬರು ಸಂಸದರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಸಂಸದರ ಜೊತೆ ಶಾಸಕರಾದ ಎನ್ ಎ ನೆಲ್ಲಿಕುನ್ನು, ಎಕೆಎಂ ಅಶ್ರಫ್ ಮತ್ತು ಇ ಚಂದ್ರಶೇಖರನ್ ಇದ್ದರು.
ತನ್ನ ಮೇಲೆ ದಾಳಿ ಮಾಡುವ ವಿಶೇಷ ಉದ್ದೇಶದಿಂದ ಕುಡುಕರು ರೈಲು ಹತ್ತಿದರು ಎಂದು ರಾಜಮೋಹನ್ ಉಣ್ಣಿತ್ತಾನ್ ಆರೋಪಿಸಿದ್ದಾರೆ. ಸಂಸದರ ದೂರಿನ ಮೇರೆಗೆ ಕಣ್ಣೂರು ಆರ್‍ಪಿಎಫ್ ಪ್ರಕರಣ ದಾಖಲಿಸಿದೆ.