ಪೆರ್ಲ: ವಿಶ್ವ ಬುಡಕಟ್ಟು ಆರೋಗ್ಯ ಹಾಗೂ ಸಂಸ್ಕøತಿ ವಾರಾಚರಣೆ ಅಂಗವಾಗಿ ಸರ್ಪಮಲೆ ಅಂಗನವಾಡಿಯಲ್ಲಿ ಪರಿಶಿಷ್ಟ ವರ್ಗ ಪ್ರಮುಖರನ್ನು ಗೌರವಿಸುವ ಕಾರ್ಯಕ್ರಮ, ಪ್ರತಿಜ್ಞಾ ಕಾರ್ಯಕ್ರಮ ನಡೆಯಿತು.
ಎಣ್ಮಕಜೆ ಪಂಚಾಯತ್ ಮಾಜಿ ಅಧ್ಯಕ್ಷೆ, ಪ್ರಸ್ತುತ ವಾರ್ಡ್ ಸದಸ್ಯೆ ರೂಪವಾಣಿ ಆರ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಊರಿನ ಹಿರಿಯರಾದ ಕಮಲಾ ಸರ್ಪಮಲೆ ಇವರಿಗೆ ಶಾಲು ಹೊದಿಸಿ ಗೌರವಿಸಿದರು. ಪರಿಶಿಷ್ಟ ವರ್ಗದ ಪ್ರಮೊಟರ್ ಶಶಿಕಲಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅಂಗನವಾಡಿ ಅಧ್ಯಾಪಿಕೆ ರಾಧಿಕಾ ಸ್ವಾಗತಿಸಿ ವಂದಿಸಿದರು . ಆಶಾ ಕಾರ್ಯಕರ್ತೆ ಜಾನಕಿ, ಸಿಡಿಎಸ್ ಸದಸ್ಯ ಉದಯ ಕುಮಾರಿ, ಹಸಿರು ಕರ್ಮ ಸೇನೆ ಕಾರ್ಯಕರ್ತೆ ಸವಿತಾ ತಡೆ ಗಲ್ಲು, ಹಾಗೂ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.