ತಿರುವನಂತಪುರಂ: ರಾಜ್ಯದಲ್ಲಿ ಶಿಕ್ಷಕರಿಗೆ ಕೋವಿಡ್ ಲಸಿಕೆಯನ್ನು ಶಿಕ್ಷಕರ ದಿನವಾದ ಸೆಪ್ಟೆಂಬರ್ 5 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಲಸಿಕೆ ಹಾಕುವಿಕೆಯ ಭಾಗವಾಗಿ 4,78,635 ಮಂದಿ ಜನರಿಗೆ ಲಸಿಕೆ ಹಾಕಲಾಗಿದೆ. 1,459 ಸರ್ಕಾರಿ ಕೇಂದ್ರಗಳು ಮತ್ತು 373 ಖಾಸಗಿ ಕೇಂದ್ರಗಳು ಸೇರಿದಂತೆ 1832 ಲಸಿಕೆ ಕೇಂದ್ರಗಳು ಇದ್ದವು. ಒಂದು ಮತ್ತು ಎರಡು ಡೋಸ್ ಸೇರಿದಂತೆ ಒಟ್ಟು 2,86,31,227 ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 2,09,75,647 ಮಂದಿಗೆ ಮೊದಲ ಡೋಸ್ ಮತ್ತು 76,55,580 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ.
ರಾಜ್ಯಕ್ಕೆ 8,00,860 ಡೋಸ್ ಲಸಿಕೆ ಲಭ್ಯವಾಗಿತ್ತು. ಇವುಗಳಲ್ಲಿ 5,09,640 ಡೋಸ್ ಲಸಿಕೆ ಭಾನುವಾರ ಬಂದಿದ್ದು, ನಿನ್ನೆ 2,91,220 ಡೋಸ್‍ಗಳು ತಲಪಿದ್ದವು. ಈ ಪ್ರಮಾಣವು ತಿರುವನಂತಪುರಂಕ್ಕೆ 2,72,000, ಎರ್ನಾಕುಳಂಗೆ 3,14,360 ಮತ್ತು ಕೋಝಿಕ್ಕೋಡ್ ಗೆ 2,14,500 ಆಗಿತ್ತು. ಇದರ ಜೊತೆಗೆ, 15 ಲಕ್ಷ ಸಿರಿಂಜ್‍ಗಳನ್ನು ಲಭ್ಯಗೊಳಿಸಲಾಗಿದೆ.