ಬೆಂಗಳೂರು: ಪ್ರಸ್ತುತ ಇರುವ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆನ್‍ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಸ್ಕ್ರೀನ್‍ಗಳ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ . ಇದರ ಪರಿಣಾಮ ಮಕ್ಕಳಲ್ಲಿ ಸಮೀಪ ದೃಷ್ಟಿ ಸಮಸ್ಯೆ ಎರಡು ಪಟ್ಟಿಗಿಂತ ಹೆಚ್ಚಾಗಿದೆ. ಇಂತಹ ಒಂದು ಆತಂಕಕಾರಿ ಬೆಳವಣಿಗೆಯನ್ನು ದೇಶಾದ್ಯಂತ ಕಣ್ಣಿನ ಆಸ್ಪತ್ರೆಗಳ ಜಾಲ ಹೊಂದಿರುವ ಡಾ.ಅಗರ್ವಾಲ್ಸï ಐ ಹಾಸ್ಪಿಟಲ್ ಪತ್ತೆ ಮಾಡಿದೆ ಮತ್ತು ಸಮಸ್ಯೆ ಉಲ್ಬಣತೆ ಬಗ್ಗೆ ಎಚ್ಚರಿಕೆಯನ್ನೂ ನೀಡಿದೆ.
ಈ ಸಂಬಂಧ ಮಾತನಾಡಿದ ಬೆಂಗಳೂರಿನ ಡಾ.ಅಗರ್ವಾಲ್ಸï ಐ ಹಾಸ್ಪಿಟಲ್‍ನ ಕನ್ಸಲ್ಟೆಂಟ್ ಆಪ್ತಲೋ ಲಾಜಿ¸್ಟï ಡಾ.ರಾಕೇಶ್ ಸೀನಪ್ಪ ಅವರು, ಮಕ್ಕಳಲ್ಲಿ ಸಾಂಕ್ರಾಮಿಕ ಆರಂಭಕ್ಕೆ ಮುನ್ನ ಇದ್ದ ಪ್ರಮಾಣಕ್ಕಿಂತ ಎರಡು ಪಟ್ಟು ಸಮೀಪದೃಷ್ಟಿ ಪ್ರಕರಣಗಳನ್ನು ಕಾಣುತ್ತಿದ್ದೇವೆ. 8-16 ವರ್ಷ ವಯೋಮಾನದ ಮಕ್ಕಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದರು.
ಸಣ್ಣ ಸ್ಕ್ರೀನ್‍ಗಳಲ್ಲಿ ಆನ್‍ಲೈನ್ ತರಗತಿಗಳ ವಿಡಿಯೋಗಳನ್ನು ವೀಕ್ಷಿಸುವುದು ಅಥವಾ ವಿಡಿಯೋ ಗೇಮ್‍ಗಳನ್ನು ಆಡುವುದು ಸೇರಿದಂತೆ ಡಿಜಿಟಲ್ ಸ್ಕ್ರೀನ್‍ಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಗಮನಾರ್ಹವಾಗಿ ಸ್ಕ್ವಿಂಟ್ -ಐ ಪ್ರಕರಣಗಳು ಅಧಿಕವಾಗುತ್ತಿವೆ.
ಡಿಜಿಟಲ್ ಸ್ಕ್ರೀನ್‍ಗಳ ದೀರ್ಘಕಾಲದ ಬಳಕೆಯಿಂದಾಗಿ ಮಕ್ಕಳ ಕಣ್ಣುಗಳಲ್ಲಿ ಡ್ರೈನೆಸ್ ಬರುತ್ತದೆ. ಇದರ ಜತೆಗೆ ಸಮೀಪದೃಷ್ಟಿ ದೋಷ, ಸೈಂಟ್ ಮತ್ತು ಅಲರ್ಜಿಗಳು ಉಂಟಾಗಬಹುದು. ಇದು ಕಣ್ಣೀರನ್ನು ಬಹುಬೇಗನೇ ಆವಿಯಾಗುವಂತೆ ಮಾಡಲಿದೆ. ಇದರ ಪರಿಣಾಮ ಕಣ್ಣುಗಳಲ್ಲಿ ಶುಷ್ಕತೆ ಇಲ್ಲದಂತಾಗಿ ರೋಗಿಗಳು ಕಣ್ಣುಗಳನ್ನು ಪದೆ ಪದೆ ಉಜ್ಜಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ಅವರು ಹೇಳಿದ್ದಾರೆ.