ನವದೆಹಲಿ: ಇಸ್ರೇಲ್ ಮತ್ತು ಭಾರತದ ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗಾಗಿ ದ್ವಿಪಕ್ಷೀಯ ಸಂಬಂಧವನ್ನು ಬಲವರ್ಧನೆಗೊಳಿಸುವ ಕುರಿತು ಚರ್ಚಿಸಲು ಭಾರತೀಯ ವಾಯುಪಡೆ ಮುಖ್ಯಸ್ಥ ಆರ್. ಕೆ.ಎಸ್ ಭದೌರಿಯಾ ಅವರು ಬುಧವಾರ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ.
'ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳು ವಿವಿಧ ಕ್ಷೇತ್ರಗಳಲ್ಲಿ ಬಲವಾದ ಹಾಗೂ ಬಹು ಆಯಾಮದ ಸಂಬಂಧಗಳನ್ನು ಹೊಂದಿವೆ. ಅದರಲ್ಲಿ ಪ್ರಮುಖವಾದುದು ರಕ್ಷಣಾ ಸಹಕಾರ ಮತ್ತು ಸೇನಾ ಹಂತದಲ್ಲಿ ನಡೆಯುವ ವಿನಿಮಯಗಳು' ಎಂದು ಭಾರತೀಯ ವಾಯುಪಡೆ (ಐಎಎಫ್) ಟ್ವಿಟರ್‌ನಲ್ಲಿ ಹೇಳಿದೆ.