ನವದೆಹಲಿ: 'ಪ್ರಧಾನಮಂತ್ರಿ ಜನಧನ' ಯೋಜನೆಯು ಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ನೆರವಾಗುವುದರ ಜತೆಗೆ ಭಾರತದ ಅಭಿವೃದ್ಧಿ ಪಥವನ್ನು ಪರಿವರ್ತಿಸಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶ್ಲಾಘಿಸಿದರು.
'ಈ ಯೋಜನೆಯು ಅಸಂಖ್ಯಾತ ಭಾರತೀಯರ ಹಣಕಾಸಿನ ಲಭ್ಯತೆ, ಘಟನೆ ಮತ್ತು ಸಬಲೀಕರಣಕ್ಕೆ ನೆರವಾಗಿದೆ. ಇದು ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿದೆ' ಎಂದು ಅವರು ಹೇಳಿದರು.
'ಪ್ರಧಾನ ಮಂತ್ರಿ ಜನಧನ' ಯೋಜನೆಗೆ ಏಳು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, 'ಈ ಯೋಜನೆಯ ಯಶಸ್ವಿಗಾಗಿ ಶ್ರಮಿಸಿದ ಎಲ್ಲರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಅವರ ಪ್ರಯತ್ನವು ಭಾರತದ ಜನರು ಉತ್ತಮ ಗುಣಮಟ್ಟದ ನಡೆಸಲು ನೆರವಾಗಿದೆ' ಎಂದರು.
'ಈ ಕಾರ್ಯಕ್ರಮದಡಿಯಲ್ಲಿ ತೆರೆಯಲಾದ 43.04 ಕೋಟಿ ಬ್ಯಾಂಕ್ ಖಾತೆಗಳ ಪೈಕಿ 36.86 ಕೋಟಿ ಖಾತೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.