ಕಾಸರಗೋಡು: ನಾಡಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಭಕ್ತಿ, ಸಡಗರದಿಂದ ಶುಕ್ರವಾರ ಆಚರಿಸಲಾಯಿತು. ಕೋವಿಡ್ ನಿಬಂಧನೆ ಹಿನ್ನೆಲೆಯಲ್ಲಿ ಸಾರ್ವಜನಿಕ ಆಚರಣೆಗೆ ನಿಯಂತ್ರಣ ಹೇರಲಾಗಿತ್ತು. ವಿವಿಧ ದೇವಾಲಯ, ತರವಾಡು ಮನೆನಾಗಬನಗಳಲ್ಲಿ ವಿಶೇಷ ತಂಬಿಲ, ಅಭಿಷೇಕ ನಡೆಯಿತು. ನಾಗರ ಪಂಚಮಿಯೊಂದಿಗೆ ನಾಡಿನಾದ್ಯಂತ ಹಬ್ಬಗಳ ಆಚರಣೆ ಆರಂಭಗೊಳ್ಳುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ನಿಬಂಧನೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಹೂವು, ಸೀಯಾಳ, ಹಾಲಿಗೂ ಹೆಚ್ಚಿನ ಬೇಡಿಕೆಯಿರಲಿಲ್ಲ.ದೇವಾಲಯಗಳಲ್ಲಿ ಬೆರಳೆಣಿಕೆಯ ಭಕ್ತಾದಿಗಳು ಮಾತ್ರ ಪಾಲ್ಗೊಂಡಿದ್ದು, ಅರ್ಚಕರು ಅಭಿಷೇಕದೊಂದಿಗೆ ಪೂಜಾ ವಿಧಿ ನೆರವೇರಿಸಿದರು.