ತಿರುವನಂತಪುರ: ಕೋವಿಡ್ ಲಸಿಕೆ ತೆಗೆದುಕೊಳ್ಳುವವರು ಮತ್ತು ತೆಗೆದುಕೊಳ್ಳಲು ಹೊರಟವರು ಒಂದು ವಾರದವರೆಗೆ ಚಿಕನ್ ತಿನ್ನಬಾರದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ಸುಳ್ಳು ಸಂದೇಶದ ವಿರುದ್ಧ ಆರೋಗ್ಯ ಇಲಾಖೆ ತೀವ್ರ ಅಸಮಧಾನ ವ್ಯಕ್ತಪಡಿಸಿದೆ. ಬ್ಲಾಗರ್ ಮತ್ತು ವೈದ್ಯೆ ಶಿಮ್ನಾ ಅಜೀಜ್ ಪೇಸ್ಬುಕ್ ಪೋಸ್ಟ್ ಮೂಲಕ ನಕಲಿ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.
ಶಿಮ್ನಾ ಅಜೀಜ್ ಅವರ ಫೇಸ್ ಬುಕ್ ಪೋಸ್ಟ್:
ಲಸಿಕೆ ಹಾಕಿಸಿಕೊಂಡ ಎರಡು ವಾರಗಳ ವರೆಗೆ ಚಿಕನ್ ಸೇವಿಸಿದರೆ ಸಾವು ಖಚಿತ ಎಂಬ ಮಾತನ್ನು ನಾನು ಕೇಳಿದ್ದೇನೆ. ನೀವು ಕ್ಯಾಟರಿಂಗ್ ತಂಡ ಮಾಡಿದ ಆಹಾರವನ್ನು ತಿಂದು ಲಸಿಕೆ ಹಾಕಿದರೂ, ಸತ್ತೇ ಹೋಗುತ್ತೀರಿ.
ಇಂತಹ ಸಂದೇಶವು ಆರೋಗ್ಯ ಇಲಾಖೆಯ ನಿರ್ದೇಶಕರ (ವಿಶೇಷ), ಗಂಗಾದಾಥನ್ ಅವರ ಹೆಸರಿನಲ್ಲಿದೆ. ಆದರೆ ಇಂತಹ ಸಂದೇಶವನ್ನು ಯಾರೂ ನೀಡಿಲ್ಲ. ಇದು ನಕಲಿ.
ಸಂದೇಶ ಮಾಡಿದ ವ್ಯಕ್ತಿಗೆ ಕೆಲಸವಿಲ್ಲದಿದ್ದರೆ, ಅಡುಗೆಮನೆಗೆ ಹೋಗಿ ಜೀರಿಗೆ ಅಥವಾ ಸಾಸಿವೆ ತೆಗೆದುಕೊಂಡು ಅದನ್ನು ಎಣಿಸಬಹುದಿತ್ತು ಎಂದು ಬರೆಯಲಾಗಿದೆ.
ಈ ಸಂದೇಶದ ಬಗ್ಗೆ ಆರೋಗ್ಯ ಸಚಿವರು ತನಿಖೆಗಾಗಿ ಆದೇಶಿಸಿದ್ದಾರೆ.