HEALTH TIPS

ಕೇರಳದಲ್ಲಿ ಕೊರೋನಾ ಹರಡುವಿಕೆ ತೀವ್ರ: ಹೆಚ್ಚು ಸೋಂಕಿರುವಲ್ಲಿ ರಾತ್ರಿ ಕಫ್ರ್ಯೂ ವಿಧಿಸಬೇಕು; ಕಠಿಣ ಸೂಚನೆ ನೀಡಿದ ಕೇಂದ್ರ

                                                  

                  ನವದೆಹಲಿ: ಕೇರಳದಲ್ಲಿ ಕೊರೋನಾ ಹರಡುವಿಕೆ ತೀವ್ರವಾಗಿರುವ ಪ್ರದೇಶಗಳಲ್ಲಿ ರಾತ್ರಿ ಕಫ್ರ್ಯೂ ವಿಧಿಸಲು ಕೇಂದ್ರ ಸರ್ಕಾರ ಕಠಿಣ ನಿರ್ದೇಶನ ನೀಡಿದೆ. ಇದೇ ರೀತಿಯ ಸಂಕಷ್ಟದಲ್ಲಿರುವ ಮಹಾರಾಷ್ಟ್ರಕ್ಕೂ ಇದೇ ಸೂಚನೆಯನ್ನು ನೀಡಲಾಗಿದೆ. ಎರಡು ರಾಜ್ಯಗಳಲ್ಲಿ ಕೊರೋನಾ ರಕ್ಷಣಾ ಚಟುವಟಿಕೆಗಳ ಪ್ರಗತಿಯನ್ನು ನಿರ್ಣಯಿಸಲು ವಿಶೇಷವಾಗಿ ಕರೆದ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಬಲ್ಲಾ ಅವರು ಈ ಸೂಚನೆ ನೀಡಿದ್ದಾರೆ.

                    ಕೇರಳದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಇತರ ರಾಜ್ಯಗಳಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಕೇರಳವು ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ರೋಗಿಗಳನ್ನು ಹೊಂದಿದೆ. ದಿನನಿತ್ಯದ ಮರಣ ಪ್ರಮಾಣವೂ ರಾಜ್ಯದಲ್ಲಿ ಹೆಚ್ಚಳಗೊಂಡಿದೆ ಎಂದು ವರದಿಯಾಗಿದೆ.

                  ರಕ್ಷಣಾ ವ್ಯವಸ್ಥೆಯನ್ನು ಸುಧಾರಿಸದಿದ್ದರೆ ಪರಿಸ್ಥಿತಿ ಹದಗೆಡುತ್ತದೆ ಎಂದು ಕೇಂದ್ರವು ಸಭೆಯಲ್ಲಿ ಎಚ್ಚರಿಸಿದೆ. ಲಸಿಕೆಯನ್ನು ಎರಡು ರಾಜ್ಯಗಳಲ್ಲಿ ತೀವ್ರವಾಗಿ ಅನುಸರಿಸಬೇಕು. ಅಗತ್ಯವಿದ್ದರೆ ಹೆಚ್ಚುವರಿ ಡೋಸ್ ನ್ನು ಅನುಮತಿಸಲಾಗುತ್ತದೆ. ಲಸಿಕೆ ತಯಾರಕರನ್ನು ಉತ್ಪಾದನೆಯನ್ನು ಹೆಚ್ಚಿಸಲು ಕೇಳಲಾಗಿದೆ.

                  ಸಂಪರ್ಕದಿಂದ ಸೋಂಕು ಹರಡುವುದನ್ನು ತಡೆಯಲು ಸಂಭ್ರಮಾಚರಣೆಯ ಕೂಟಗಳಿಗೆ ಕಠಿಣ ನಿಬರ್ಂಧಗಳನ್ನು ವಿಧಿಸಬೇಕು ಎಂದು ಗೃಹ ಕಾರ್ಯದರ್ಶಿ ಸೂಚನೆ ನೀಡಿರುವರು. ಆನ್‍ಲೈನ್ ಸಭೆಯಲ್ಲಿ ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries